ಹೊಸದಿಲ್ಲಿ : ಸಂವೇದನಾಶೀಲ ಪ್ರದರ್ಶನಕ್ಕಾಗಿ ಕ್ರಿಕೆಟಿಗ ಮುಹಮ್ಮದ್ ಶಮಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ. ಜ.9ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಯನ್ನು ಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ. ಟೀಂ ಇಂಡಿಯಾ ಅನುಭವಿ ಬೌಲರ್ ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್-2023ರಲ್ಲಿ ಕೇವಲ ಏಳು ಇನ್ನಿಂಗ್ಸ್ಗಳಲ್ಲಿ 24 ವಿಕೆಟ್ಗಳೊಂದಿಗೆ ಉತ್ತಮ ಬೌಲಿಂಗ್ ನಡೆಸಿದ್ದರು.