News Karnataka Kannada
Monday, April 29 2024
ದೆಹಲಿ

ಅಯೋಧ್ಯೆಯಲ್ಲಿ ರಾಮಜ್ಯೋತಿ ಬೆಳಗಿದ ಪ್ರಧಾನಿ ನರೇಂದ್ರ ಮೋದಿ

ಅಯೋಧ್ಯೆಯಲ್ಲಿ ರಾಮ ಲಲ್ಲಾನ ವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ  ಸೋಮವಾರ ಸಂಜೆ ‘ರಾಮ ಜ್ಯೋತಿ’ ಬೆಳಗಿಸಿದರು.
Photo Credit : News Kannada

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಲಲ್ಲಾನ ವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ  ಸೋಮವಾರ ಸಂಜೆ ‘ರಾಮ ಜ್ಯೋತಿ’ ಬೆಳಗಿಸಿದರು.

ಈ ಮೊದಲೇ ಅವರು ರಾಮ ಜ್ಯೋತಿ ಬೆಳಗಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಶುಭ ಸಂದರ್ಭದಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸಿ ರಾಮ ಲಲ್ಲಾನನ್ನು ಸ್ವಾಗತಿಸುವಂತೆ ಪ್ರಧಾನಿ ನಾಗರಿಕರಿಗೆ ಹೇಳಿದ್ದರು.

ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ಬಿಜೆಪಿ ಕಾರ್ಯಕರ್ತರು 1008 ರಾಮ ಜ್ಯೋತಿಗಳನ್ನು ಬೆಳಗಿದರು. ಒಟ್ಟಾರೆ 10 ಲಕ್ಷ ದೀಪಗಳಿಂದ ಅಯೋಧ್ಯೆ ಮಿನುಗುತ್ತಿದೆ.

ಈ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳು ರಾಮ ಜ್ಯೋತಿಯನ್ನು ಬೆಳಗಿಸಲು ಮತ್ತು ಅವರ ಮನೆಗಳಲ್ಲಿ ಭಗವಾನ್ ರಾಮನನ್ನು ಸ್ವಾಗತಿಸಲು ನಾನು ವಿನಂತಿಸುತ್ತೇನೆ. ಜೈ ಸಿಯಾ ರಾಮ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ವೇದಿಕೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು