ನವದೆಹಲಿ: ಇಂದಿನಿಂದ 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆ 25 ರೂ. ಹೆಚ್ಚಿಸಲಾಗಿದೆ.
ಮಾ. 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ LPG ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು ಪರಿಷ್ಕರಿಸಿವೆ. ಇಂದಿನಿಂದ ಈ ಹೊಸ ದರ ಜಾರಿಗೆ ಬರಲಿದೆ. ಇನ್ನುಮುಂದೆ ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ 1,795 ರೂ. ಇಲ್ಲಿದೆ.
ಇನ್ನೂ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೋಲ್ಕತ್ತಾದಲ್ಲಿ 1,911 ರೂ., ಮುಂಬೈನಲ್ಲಿ 1,749 ರೂ. ಮತ್ತು ಚೆನ್ನೈನಲ್ಲಿ 1,960.50 ರೂ.ಗೆ ಲಭ್ಯವಾಗಲಿದೆ.