ದೆಹಲಿ: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ಕಮರ್ಷಿಯಲ್ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸೋಮವಾರ ರೂ. 36 ಇಳಿಕೆ ಮಾಡಲಾಗಿದೆ.
ಈ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್ ದರ ದೆಹಲಿಯಲ್ಲಿ 1,976 ರೂ.ಗೆ ಇಳಿಕೆಯಾಗಿದೆ. ಪ್ರಸ್ತುತ 2012.50 ರೂ. ದರವಿದೆ.
ಇನ್ನು ರಾಜ್ಯಗಳಲ್ಲಿ ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ಬೆಲೆಯಲ್ಲಿ ಇಳಿಕೆಯಾಗಲಿದೆ. ಈ ನಡುವೆ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.
ಕಳೆದ 4ತಿಂಗಳ ಅವಧಿಯಲ್ಲಿ ಎಲ್ ಪಿಜಿ ದರವನ್ನು 4ಬಾರಿ ಪರಿಷ್ಕರಿಸಲಾಗಿದ್ದು ಜೂನ್ ತಿಂಗಳಲ್ಲಿ ಕೇಂದ್ರ ಸರಕಾರವು ವಾಣಿಜ್ಯ ಬಳಕೆಯ ಹತ್ತೊಂಬತ್ತು ಕೆಜಿ ಸಿಲಿಂಡರ್ ಬೆಲೆಯಲ್ಲಿ 135 ರೂ ಇಳಿಕೆ ಮಾಡಿತ್ತು.
The price of a commercial LPG cylinder has been cut by Rs 36 from today. With this latest reduction, a 19 kg commercial LPG cylinder will cost Rs 1,976, instead of Rs 2012.50.
— ANI (@ANI) August 1, 2022