News Karnataka Kannada
Thursday, May 09 2024
ದೆಹಲಿ

ದೆಹಲಿ: 50 ಕೇಂದ್ರಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ಕೋರ್ಸ್‌ ಆರಂಭಿಸುವುದಾಗಿ  ಘೋಷಿಸಿದ ಕೇಜ್ರಿವಾಲ್‌

Can the name of the country be changed to BJP: Kejriwal
Photo Credit : Twitter

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದೆಹಲಿಯಾದ್ಯಂತ 50 ಕೇಂದ್ರಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ಕೋರ್ಸ್‌ ಆರಂಭಿಸುವುದಾಗಿ  ಶನಿವಾರ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 12ನೇ ತರಗತಿ ಪೂರ್ಣಗೊಳಿಸಿರುವ 18-35 ವರ್ಷ ವಯೋಮಾನದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಮೊದಲ ಹಂತದಲ್ಲಿ 1 ಲಕ್ಷ ಮಕ್ಕಳನ್ನು ದಾಖಲಿಸಿಕೊಂಡು, ಅವರ ಇಂಗ್ಲಿಷ್‌ ಸಂವಹನ ಕೌಶಲವನ್ನು ವೃದ್ಧಿಸಲಾಗುತ್ತದೆ ಎಂದರು.

ಈ ಕೋರ್ಸ್‌ಗೆ ದಾಖಲಾಗಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಆದರೆ ಭದ್ರತಾ ಠೇವಣಿಯಾಗಿ ಮೊದಲಿಗೆ ₹950 ಪಾವತಿಸಬೇಕು. ಪೂರ್ಣ ಹಾಜರಾತಿಯೊಂದಿಗೆ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಆ ಹಣವನ್ನು ಮರು ಪಾವತಿ ಮಾಡಲಾಗುತ್ತದೆ.

ಇದು ಮೂರು ತಿಂಗಳ ಕೋರ್ಸ್‌ ಆಗಿದ್ದು, ಉದ್ಯೋಗದಲ್ಲಿರುವ ಯುವಜನತೆಗಾಗಿ ವಾರಾಂತ್ಯ ಮತ್ತು ಸಂಜೆ ಪಾಳಿಯ ಆಯ್ಕೆಗಳೂ ಇವೆ ಎಂದು ವಿವರಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು