News Karnataka Kannada
Sunday, May 12 2024
ದೆಹಲಿ

ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

Kannadigas share their experience of israel's battlefield
Photo Credit : News Kannada

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 230 ಮಂದಿ ಭಾರತೀಯರನ್ನ ಕರೆತರಲಾಗಿದ್ದು, ಈ ಪೈಕಿ ಐವರು ಕನ್ನಡಿಗರು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಯುದ್ಧಭೂಮಿಯ ಅನುಭವ ಬಿಚ್ಚಿಟ್ಟಿದ್ದಾರೆ.

ಕೆಲಸ ಮಾಡಿಕೊಂಡಿರುವ ಮಹಾರಾಷ್ಟ್ರ ಮೂಲದ ಯುವತಿ ಪ್ರಿಯಾಂಕಾ ಎಂಬುವವರು ಮತನಾಡಿದ್ದ್ದು, ನಾನು ಇದ್ದ ಅಷ್ಟೂ ದಿನಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಸಮಸ್ಯೆ ಆಗಿರೋದು. ನಾವು ಇಸ್ರೇಲ್‌ ಕೇಂದ್ರ ಭಾಗದಲ್ಲಿದ್ದೆವು. ದಕ್ಷಿಣಕ್ಕೆ 120 ಕಿಮೀ ದೂರದಲ್ಲಿದ್ದ ಗಾಜಾಪಟ್ಟಿಯಲ್ಲಿ ದಾಳಿ ನಡೆದಿತ್ತು. ಇದರಿಂದ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೆವು ಎಂದು ಹೇಳಿದ್ದಾರೆ.

ಮತ್ತೊಬ್ಬ ಕನ್ನಡಿಗ ಮಾತನಾಡಿ, ನಾವು ಬಂಕರ್‌ಗಳಲ್ಲಿ ಅಡಗಿ ಕೂರಬೇಕಿತ್ತು. ದಿನಕ್ಕೆ ಎರಡು ಬಾರಿ ಸೈರನ್‌ ಮಾಡುತ್ತಿದ್ದರು. ಆಗ 9 ನಿಮಿಗಳಷ್ಟೇ ಕಾಲಾವಕಾಶ ಸಿಗುತ್ತಿತ್ತು. ಅಷ್ಟರಲ್ಲೇ ನಾವು ಮತ್ತೊಂದು ಬಂಕರ್‌ ಸೇರಿಕೊಳ್ಳಬೇಕಿತ್ತು. ನಾವು ಬಂಕರ್‌ ನಿಂದ ಮತ್ತೊಂದು ಬಂಕರ್‌ಗೆ ತೆರಳುತ್ತಿದ್ದ ವೇಳೆ ಅನೇಕ ಇಸ್ರೇಲಿಯನ್ನರು ನನಗೆ ಸಹಾಯ ಮಾಡಿದರು, ಸೇಫ್‌ ಆಗಿ ಹೋಗಿ ಅಂತಾ ಹೇಳಿದರು. ಅವರ ಹೆಸರೂ ಕೂಡ ನನಗೆ ಗೊತ್ತಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ವಿಜಯಪುರ ಮೂಲದ ಈರಣ್ಣ ಎಂಬುವರು ಮಾತನಾಡಿ, ನಾವಿದ್ದ 300 ಕಿಮೀ ದೂರದಲ್ಲಿ ಯುದ್ಧ ಶುರುವಾಗಿತ್ತು. ಗಡಿ ಭಾಗಗಳಲ್ಲಿ ಮಾತ್ರ ಸಮಸ್ಯೆಯಿತ್ತು. ಆದ್ರೆ ನಾವಿದ್ದ ಕಡೆ ತುಂಬಾ ಸೇಫ್‌ ಇತ್ತು ಎಂದು ಹೇಳಿದ್ದಾರೆ. ಇಸ್ರೇಲ್‌ ಉತ್ತರ ಭಾಗದಲ್ಲಿ ಮತ್ತು ದಕ್ಷಿಣಕ್ಕೆ ಇರುವ ಗಾಜಾದಲ್ಲಿ ಸಮಸ್ಯೆ ತುಂಬಾ ಸಮಸ್ಯೆಯಾಗಿತ್ತು. ಭಾರತಕ್ಕೆ ಬಂದ ನಂತರ ಆತಂಕವೆಲ್ಲಾ ದೂರವಾಯಿತು. ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಸೇರಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು