News Karnataka Kannada
Friday, May 03 2024
ದೆಹಲಿ

ಜೆಎನ್‌ಯು ಚುನಾವಣೆ: ಎಡ ಸಂಘಟನೆ ಮತ್ತು ಎಬಿವಿಪಿ ನಡುವೆ ತೀವ್ರ ಪೈಪೋಟಿ

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಎಡ ಸಂಘಟನೆಗಳ ಒಕ್ಕೂಟ ಮತ್ತು ಆರ್ಎಸ್ಎಸ್ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಡುವೆ ತೀವ್ರ ಪೈಪೋಟಿ ನಡೆದಿದೆ.
Photo Credit : NewsKarnataka

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಎಡ ಸಂಘಟನೆಗಳ ಒಕ್ಕೂಟ ಮತ್ತು ಆರ್‌ಎಸ್‌ಎಸ್‌ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ನಡುವೆ ತೀವ್ರ ಪೈಪೋಟಿ ನಡೆದಿದೆ.

ಆರಂಭಿಕ ಸುತ್ತುಗಳ ಎಣಿಕೆ ಪ್ರಕಾರ, ಅಧ್ಯಕ್ಷೀಯ ಸ್ಥಾನಕ್ಕೆ ಎಡ ಸಂಘಟನೆಗಳ ಒಕ್ಕೂಟದ ಅಭ್ಯರ್ಥಿ ಧನಂಜಯ್‌ 1,361 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಎಬಿವಿಪಿಯ ಉಮೇಶ್‌ ಸಿ. ಅಜ್ಮೀರಾ ಅವರು 1,162 ಮತಗಳನ್ನು ಪಡೆದಿದ್ದು, ತೀವ್ರ ಸ್ಪರ್ಧೆ ನೀಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಎಡ ಸಂಘಟನೆಯ ಅವಿಜಿತ್‌ ಘೋಷ್‌ ಅವರು 1,214 ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದು, ಅವರ ಎದುರಾಳಿ ಎಬಿವಿಪಿಯ ದೀಪಿಕಾ ಶರ್ಮಾ ಅವರು 984 ಮತಗಳನ್ನು ಪಡೆದು ಪೈಪೋಟಿ ಕೊಟ್ಟಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಡ ಸಂಘಟನೆಗಳ ಬೆಂಬಲಿತ, ಬಿಎಪಿಎಸ್‌ಎ ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು 1,478 ಮತಗಳನ್ನು ಗಳಿಸಿದ್ದು, ಅವರ ಪ್ರತಿಸ್ಪರ್ಧಿ ಅರ್ಜುನ್‌ ಆನಂದ್‌ ಅವರು 1,309 ಮತಗಳನ್ನು ಪಡೆದಿದ್ದಾರೆ. ಎಡ ಸಂಘಟನೆಗಳ ಅಭ್ಯರ್ಥಿಯಾಗಿದ್ದ ಸ್ವಾತಿ ಸಿಂಗ್‌ ಅವರ ಅಭ್ಯರ್ಥಿತನವನ್ನು ಎಬಿವಿಪಿ ಪ್ರಶ್ನಿಸಿದ ಬಳಿಕ, ಚುನಾವಣಾ ಸಮಿತಿಯ ಸಿಂಗ್‌ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿತ್ತು. ಆ ಬಳಿಕ ಎಡ ಸಂಘಟನೆಗಳು ತನ್ನ ಬೆಂಬಲವನ್ನು ಪ್ರಿಯಾಂಶಿ ಆರ್ಯಗೆ ನೀಡಿದ್ದರು.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿಯಲ್ಲಿ ಎಬಿವಿಪಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಎಬಿವಿಪಿ ಅಭ್ಯರ್ಥಿಯು 1391 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿಯಾಗಿರುವ ಎಡ ಸಂಘಟನೆಗಳ ಅಭ್ಯರ್ಥಿ ಎಂ.ಡಿ. ಸಾಜಿದ್‌ 1,321 ಮತಗಳನ್ನು ಪಡೆದಿದ್ದಾರೆ. ಇನ್ನೂ ಹಲವು ವಿಭಾಗಗಳ ಮತಗಳ ಎಣಿಕೆ ಕಾರ್ಯ ಬಾಕಿ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು