News Karnataka Kannada
Friday, May 10 2024
ದೆಹಲಿ

ರಿಲಯನ್ಸ್ ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್

JioSpace Fiber comes from Reliance Jio
Photo Credit : News Kannada

ದೆಹಲಿ: ಭಾರತಕ್ಕೆ ಹೆಮ್ಮೆ ತರುವಂಥ ಕ್ಷಣ ಇನ್ನೇನು ನಾವೆಲ್ಲ ಸಾಕ್ಷಿ ಆಗಲಿದ್ದೇವೆ. ನಿಮಗೆ ಈಗಾಗಲೇ ಗೊತ್ತಿರುವಂತೆ ವಿಶ್ವದ ಅತಿದೊಡ್ಡ ಖಾಸಗಿ ಮೊಬೈಲ್ ಡೇಟಾ ನೆಟ್ ವರ್ಕ್ ಆಗಿರುವ ಜಿಯೋ ಇನ್ಫೋಕಾಮ್ ಈಗ ಭಾರತದಲ್ಲಿ ಈ ಹಿಂದೆ ತಲುಪದ ಸ್ಥಳಗಳನ್ನು ಸಹ ಮುಟ್ಟಲು ಸಿದ್ಧವಾಗಿದೆ. ಅದು ಕೂಡ ಅತ್ಯಂತ ವೇಗದ ಬ್ರಾಂಡ್ ಬ್ಯಾಂಡ್ ಸೇವೆಯ ಮೂಲಕ. ಇದನ್ನು ಸಾಧ್ಯವಾಗಿಸುವುದಕ್ಕೆ ಉಪಗ್ರಹ ಆಧಾರಿತ ಗಿಗಾ ಫೈಬರ್ ಸೇವೆಯನ್ನು ಜಿಯೋ ಪ್ರದರ್ಶಿಸಿದೆ ಮತ್ತು ಅದು ಯಶಸ್ವಿ ಕೂಡ ಆಗಿದೆ. ರಿಲಯನ್ಸ್ ಜಿಯೋ ತನ್ನ ಉಪಗ್ರಹ ಆಧಾರಿತ ಬ್ರಾಡ್ ಬ್ಯಾಂಡ್ ಆದ ಜಿಯೋಸ್ಪೇಸ್ ಫೈಬರ್ ಅನ್ನು ಶುಕ್ರವಾರದಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರದರ್ಶಿಸಿತು. ಅಂದ ಹಾಗೆ ಈ ಸೇವೆಯು ದೇಶದ ಉದ್ದಗಲಕ್ಕೂ ಲಭ್ಯವಿದ್ದು, ದರ ಕೂಡ ಕೈಗೆಟುಕುವ ಮಟ್ಟದಲ್ಲೇ ಇರುತ್ತದೆ.

ಜಿಯೋದ ಹೆಚ್ಚುಗಾರಿಕೆ ಏನೆಂದರೆ, ಇಂದಿಗೆ ನಲವತ್ತೈದು ಕೋಟಿ ಭಾರತೀಯ ಗ್ರಾಹಕರಿಗೆ ಹೆಚ್ಚಿನ ವೇಗದ ಬ್ರಾಡ್ ಬ್ಯಾಂಡ್ ಸ್ಥಿರ ತಂತು ಮತ್ತು ನಿಸ್ತಂತು ಸೇವೆಗಳನ್ನು ನೀಡುತ್ತಿದೆ. ಭಾರತದ ಪ್ರತಿ ಮನೆಯು ಡಿಜಿಟಲ್ ಒಳಗೊಳ್ಳುವಿಕೆ ಆಗುವುದನ್ನು ವೇಗ ಮಾಡುವ ಉದ್ದೇಶದಿಂದ ಇದೀಗ ತನ್ನ ಬ್ರಾಡ್ ಬ್ಯಾಂಡ್ ಸೇವೆಗಳಾದ ಜಿಯೋಫೈಬರ್, ಜಿಯೋಏರ್ ಫೈಬರ್ ಗೆ ತನ್ನ ಹೊಸ ಜಿಯೋಸ್ಪೇಸ್ ಫೈಬರ್ ಅನ್ನು ಸಸೇರ್ಪಡೆ ಮಾಡಿದೆ. ಗ್ರಾಹಕರರಿರಲಿ, ಉದ್ಯಮ, ವ್ಯಾಪಾರಗಳೇ ಇರಲಿ ಯಾವ ಸ್ಥಳದಲ್ಲಿ ಇರುವುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ವಿಶ್ವಾಸಾರ್ಹ, ಲೋ ಲೇಟೆಂಟ್ ಮತ್ತು ಹೆಚ್ಚು ವೇಗದ ಇಂಟರ್ ನೆಟ್ ಹಾಗೂ ಮನರಂಜನಾ ಸೇವೆಗಳಿಗೆ ಸಂಪರ್ಕವನ್ನು ಪಡೆಯಬಹುದಾಗಿದೆ. ಈ ಉಪಗ್ರಹ ಜಾಲ ಏನಿದೆಯಲ್ಲಾ, ಇದು ಮೊಬೈಲ್ ಬ್ಯಾಕ್ ಹೌಲ್ ಗೆ ಇನ್ನೂ ಹೆಚ್ಚುವರಿಗೆ ಸಾಮರ್ಥ್ಯದ ಸಹಿತ ಬೆಂಬಲಿಸುತ್ತದೆ. ಇದು ದೇಶದ ದೂರ ದೂರದ ಭಾಗಗಳಲ್ಲಿ ಜಿಯೋ ಟ್ರೂ 5ಜಿ ಲಭ್ಯತೆ ಮತ್ತು ಪ್ರಮಾಣವನ್ನು ಇನ್ನೂ ಹೆಚ್ಚು ಮಾಡುತ್ತದೆ.

ಜಾಗತಿಕ ಮಟ್ಟದಲ್ಲಿ ಇವತ್ತಿಗೆ ಮುಖ್ಯವಾದಂಥ ಮೀಡಿಯಂ ಅರ್ಥ್ ಆರ್ಬಿಟ್ ಉಪಗ್ರಹ ತಂತ್ರಜ್ಞಾನ ಸಂಪರ್ಕಿಸುವುದಕ್ಕೆ ಎಸ್ಇಎಸ್ ಜತೆಗೆ ಜಿಯೋ ಪಾಲುದಾರಿಕೆ ಹೊಂದಿದೆ. ಇದು ವಿಶಿಷ್ಟ ಗಿಗಾಬಿಟ್, ಫೈಬರ್ ತರಹದ ಸೇವೆಗಳನ್ನು ಬಾಹ್ಯಾಕಾಶದಿಂದ ತಲುಪಿಸುವ ಸಾಮರ್ಥ್ಯ ಹೊಂದಿರುವ ಏಕೈಕ ಎಂಇಒ ಸಮೂಹ ಆಗಿದೆ ಎಸ್ಇಎಸ್ O3b ಮತ್ತು ಹೊಸ O3b mPOWER ಉಪಗ್ರಹಗಳ ಸಂಯೋಜನೆಗೆ ಜಿಯೋ ಸಂಪರ್ಕ ಪಡೆಯುವ ಮೂಲಕ, ಎಲ್ಲ ಆಟವನ್ನೇ ಬದಲಿಸಬಲ್ಲಂಥ ತಣತ್ರಜ್ಞಾನ ಒದಗಿಸುವ ಏಕೈಕ ಕಂಪನಿ ಇದಾಗಿದೆ. ಈ ಮೂಲಕ ಕೈಗೆಟುಕುವ ದರದಲ್ಲಿ ಮತ್ತು ವ್ಯಾಪಕವಾಗಿ ಭಾರತದಾದ್ಯಂತ ಬ್ರಾಡ್ ಬ್ಯಾಂಡ್ ದೊರೆಯುವಂತೆ ಆಗುತ್ತದೆ. ಇನ್ನು ಇದೇ ಮೊದಲ ಬಾರಿಗೆ ಟೆಲಿಕಾಂ ಉದ್ಯಮದಲ್ಲಿ ಖಾತ್ರಿಯಾದ ವಿಶ್ವಾಸಾರ್ಹತೆ ಮತ್ತು ಸೇವೆಯಲ್ಲಿ ಆರಾಮದಾಯಕತೆಯನ್ನು ಸಹ ಒದಗಿಸಲಿದೆ.

ಈ ತಂತ್ರಜ್ಞಾನದ ಶಕ್ತಿಯನ್ನು ಪ್ರದರ್ಶಿಸುವ ಸಲುವಾಗಿ ಹಾಗೂ ತಲುಪಿಸುವುದಕ್ಕೆ ಭಾರತದಲ್ಲಿ ಅತ್ಯಂತ ದೂರದ ಸ್ಥಳಗಳನ್ನು ಈಗಾಗಲೇ ಜಿಯೋಸ್ಪೇಸ್ ಫೈಬರ್ ಜತೆಗೆ ಸಂಪರ್ಕಿಸಲಾಗಿದೆ. ಆ ಸ್ಥಳಗಳು ಯಾವುದೆಂದರೆ, ಗುಜರಾತ್ ನ ಗಿರ್, ಛತ್ತೀಸ್ ಗಢದ ಕೊರ್ಬಾ, ಒಡಿಶಾದ ನಬರಂಗಪುರ, ಅಸ್ಸಾಂನ ಒಎನ್ ಜಿಸಿ- ಜೊರ್ಹಾತ್.

ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು ಮಾತನಾಡಿ, ಇದೇ ಮೊದಲ ಬಾರಿಗೆ ಎಂಬಂತೆ ಹತ್ತಾರು ಲಕ್ಷ ಕುಟುಂಬಗಳು, ವ್ಯವಹಾರಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಅನುಭವ ದೊರೆಯುವಂತೆ ಮಾಡಿದೆ ಜಿಯೋ. ಇನ್ನೂ ಹತ್ತಾರು ಲಕ್ಷ ಮಂದಿ ಯಾರು ಇನ್ನೂ ಕವರ್ ಆಗಿಲ್ಲವೋ ಜಿಯೋಸ್ಪೇಸ್ ಫೈಬರ್ ನೊಂದಿಗೆ ಅದು ಕೂಡ ಸಾಧ್ಯ ಮಾಡುತ್ತೇವೆ. ಜಿಯೋಸ್ಪೇಸ್ ಫೈಬರ್ ಎಲ್ಲರನ್ನೂ ಎಲ್ಲ ಕಡೆಯಿಂದಲೂ ಸಂಪರ್ಕಿಸುವುದಕ್ಕೆ ಸಹಾಯ ಮಾಡುತ್ತದೆ. ಸರ್ಕಾರಿ ಆನ್ ಲೈನ್, ಶಿಕ್ಷಣ, ಆರೋಗ್ಯ, ಮತ್ತು ಮನರಂಜನಾ ಸೇವೆಗಳಿಗೆ ಸಂಪರ್ಕ ಪಡೆಯುವುದಕ್ಕೆ ಗಿಗಾಬಿಟ್ ಮೂಲಕ ಹೊಸ ಡಿಜಿಟಲ್ ಸಮಾಜಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಜಿಯೋ ಜತೆಗೂಡಿ ಭಾರತದ ಯಾವುದೇ ಸ್ಥಳಕ್ಕೆ ಪ್ರತಿ ಸೆಕೆಂಡ್ ಗೆ ಬಹು ಗಿಗಾಬಿಟ್ ಗಳನ್ನು ತಲುಪಿಸುವ ಗುರಿ ಹೊಂದಿರುವ ವಿಶಿಷ್ಟ ಸಲ್ಯೂಷನ್ ನೊಂದಿಗೆ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಉಕ್ರಮವ ಬೆಂಬಲಿಸುವುದನ್ನು ನಾವು ಗೌರವಿಸುತ್ತೇವೆ ಎಂದು ಎಸ್ಇಎಸ್ ಮುಖ್ಯ ಕಾರ್ಯತಂತ್ರ ಅಧಿಕಾರಿ ಜಾನ್ -ಪಾಲ್ ಹೆಮಿಂಗ್ ವೇ ಹೇಳಿದ್ದಾರೆ. ಬಾಹ್ಯಾಕಾಶದಿಂದ ನಮ್ಮ ಮೊದಲ ಫೈಬರ್ ತರಹದ ಸೇವೆಗಳನ್ನು ಈಗಾಗಲೇ ಭಾರತದ ಕೆಲವು ಭಾಗಗಳಲ್ಲಿ ನಿಯೋಜಿಸಲಾಗಿದೆ ಮತ್ತು ಇದು ದೇಶದ ಹೆಚ್ಚಿನ ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ರೂಪಾಂತರಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೋಡಲು ನಾವು ಕಾಯುವುದಕ್ಕೆ ಸಹ ಸಾಧ್ಯವಿಲ್ಲ,” ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು