ದೆಹಲಿ

ಅನ್ನದಾತರ ಪ್ರತಿಭಟನಾ ಸ್ಥಳದಲ್ಲಿ ಇಂಟರ್ನೆಟ್ ಬಂದ್ ಬಂದ್..!

ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನ್ನದಾತರ ಸಮರ ರೈತ ದಂಗಲ್ 4ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಹಾಗೂ ರೈತರ ನಡುವಿನ ರಣರಂಗ ಮತ್ತಷ್ಟು ತೀವ್ರಗೊಂಡಿದೆ. ರೈತರನ್ನು ಕಟ್ಟಿಹಾಕಲು ಭದ್ರತಾಪಡೆ ಸೇನಾನಿಗಳಂತೆ ಹೋರಾಡುತ್ತಿದ್ದಾರೆ.

ಸಾವಿರಾರು ರೈತರಿಂದ ದೆಹಲಿ ಚಲೋಗೆ ಯುದ್ಧಕ್ಕೆ ಹೊರಟವರಂತೆ ಅನ್ನದಾತರು ನುಗ್ಗುತ್ತಿದ್ದಾರೆ. ರೈತರನ್ನ ತಡೆಯಲು ಪೊಲೀಸರ ರಣವ್ಯೂಹ ರಚನೆ ಮಾಡಿದ್ದಾರೆ.

ರೈತರ ಪ್ರತಿಭಟನೆ ಕಾವೇರುತ್ತಿರುವ ಹಿನ್ನೆಲೆಯಲ್ಲಿ ಹರಿಯಾಣದ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್ ಸೇರಿ ಏಳು ಜಿಲ್ಲೆಗಳಲ್ಲಿ ನಾಳೆವರೆಗೆ ಇಂಟರ್ನೆಟ್ ಹಾಗೂ ಎಸ್​ಎಂಎಸ್​ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿದೆ.

ಇನ್ನು ರೈತ ಹೋರಾಟಕ್ಕೆ ಕೇಂದ್ರ ಸರ್ಕಾರ ಹಲವು ನಿರ್ಬಂಧ ವಿಧಿಸಿರೋದನ್ನ ಖಂಡಿಸಿ ಇಂದು ಗ್ರಾಮೀಣ ಭಾರತ ಬಂದ್​​ಗೆ ರೈತ ಸಂಘಗಳು ಕರೆ ನೀಡಿವೆ. ದೇಶವ್ಯಾಪಿ ಗ್ರಾಮಗ್ರಾಮಗಳಲ್ಲೂ ಬಂದ್ ಆಗಬೇಕು ಅಂತ ಕರೆ ನೀಡಿವೆ. ಬೆಳಗ್ಗೆಯಿಂದ ಸಂಜೆ 4ರವರೆಗೆ ಕರೆ ನೀಡಿವೆ. ದೇಶಾದ್ಯಂತ ಪ್ರತಿಭಟನೆ ನಡೆಸಲು ರೈತರು ತೀರ್ಮಾನಿಸಿದ್ದಾರೆ. ಇನ್ನು ಕರ್ನಾಟಕದಲ್ಲೂ ರಸ್ತೆ ತಡೆ ನಡೆಸಲು ರೈತ ಸಂಘಟನೆಗಳು ಕರೆ ನೀಡಿವೆ.

Ashika S

Recent Posts

ನ್ಯಾಯಾಧೀಶರುಗಳು ವರ್ಗಾವಣೆ : ವಕೀಲರ ಸಂಘ ಬೀಳ್ಕೊಡುಗೆ

ಜಿಲ್ಲಾ ನ್ಯಾಯಾಲಯದಲ್ಲಿ ಸತತ ಮೂರು ವರ್ಷ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ನ್ಯಾಯಾಧೀಶರುಗಳಾದ ಶಾಂತಣ್ಣ ಮುತ್ತಪ್ಪ ಆಳ್ವ, ಆರ್.ಪಿ.ನಂದೀಶ್, ಎ.ಎಸ್. ಸೋಮ, ಎ.ಕಾಜಲ್…

49 seconds ago

ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್: ವ್ಯಕ್ತಿ ಕಂಗಾಲು

ಬೆಂಗಳೂರಿನ ಜೆಬಿ ಕಾವಲ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಬಂದ ಘಟನೆ ನಡೆದಿದೆ.

15 mins ago

ಜನಪರ ಯೋಜನೆಗಳ ಮೂಲಕ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ : ಹೆಚ್.ಡಿ ತಮ್ಮಯ್ಯ

ಹಳೇ ಬೇರು ಹೊಸ ಚಿಗುರು ಎಂಬಂತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಜನಪರವಾದ ಯೋಜನೆಗಳ ಮೂಲಕ ಮತದಾರರ ವಿಶ್ವಾಸ…

18 mins ago

ಹೊಸ ರುಚಿ: ವೆಜ್ ಮಿಕ್ಸ್ ದೋಸೆ ಮಾಡುವುದು ಹೇಗೆ?

ಏನಾದರೊಂದು ಹೊಸ ರುಚಿ ಬಯಸುವವರು ಮತ್ತು ಮನೆಯಲ್ಲಿಯೇ ಆರೋಗ್ಯ ಕಾಪಾಡುವ ತಿನಿಸುಗಳನ್ನು ಬಯಸುವವರು ವೆಜ್  ಮಿಕ್ಸ್  ದೋಸೆಯನ್ನು ತಯಾರಿಸಬಹುದಾಗಿದೆ.

41 mins ago

ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ  ಸಮೀಪದ  ಕಾಲೇಜಿನ ಐದನೇ ಮಹಡಿಯಿಂದ ವಿದ್ಯಾರ್ಥಿಯೊಬ್ಬ‌  ಜಿಗಿದು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ  ನಡೆದಿದೆ.

52 mins ago

ಕೊಲೆಯಾದ ಅಂಜಲಿ ಮನೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ

ಕೊಲೆಯಾದ ಯುವತಿ ಅಂಜಲಿ ಮನೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ ನೀಡಿದ್ದಾರೆ. ಇದೇ ವೇಳೆ ಇತ್ತೀಚೆಗೆ ಕೊಲೆಯಾದ ನೇಹಾ ಹಿರೇಮಠ…

1 hour ago