ನವದೆಹಲಿ: ಮುಂಬೈ ಏರ್ಪೋರ್ಟ್ನ ರನ್ವೇನಲ್ಲೇ ಪ್ರಯಾಣಿಕರು ಕುಳಿತು ಆಹಾರ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ 1.2 ಕೋಟಿ ರೂ. ದಂಡ ವಿಧಿಸಿದೆ.
ಇತ್ತೀಚಿಗೆ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್ವೇನಲ್ಲೇ ಕುಳಿತು ಊಟ ಸೇವಿಸಿದ್ದರು. ಈ ವೀಡಿಯೋ ವೈರಲ್ ಆಗಿತ್ತು.
ದೇಶದ ವಿಮಾನಯಾನ ನಿಯಂತ್ರಕ, ಡಿಜಿಸಿಎ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಲೋಪಕ್ಕಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ 30 ಲಕ್ಷ ರೂ. ದಂಡ ವಿಧಿಸಿದೆ.