News Karnataka Kannada
Thursday, May 02 2024
ದೆಹಲಿ

ವ್ಯಾಪರ ಹಡಗಿನ ಮೇಲೆ ದಾಳಿ: ಡ್ರೋನ್‌ ಅವಶೇಷಗಳನ್ನು ಪತ್ತೆ ಮಾಡಿದ ಭಾರತೀಯ ನೌಕಾಪಡೆ

Indian Navy recovers drone debris after attack on business ship
Photo Credit : News Kannada

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಅರಬ್ಬಿ ಸಮುದ್ರದಲ್ಲಿ ವ್ಯಾಪರ ಹಡಗಿನ ಮೇಲೆ ದಾಳಿ ಮಾಡಿದ್ದ ಡ್ರೋನ್ ನ ಅವಶೇಷಗಳನ್ನು ಕೊನೆಗೂ ಭಾರತೀಯ ನೌಕಾಪಡೆ ಪತ್ತೆ ಮಾಡಿದ್ದು, ಡ್ರೋನ್ ನಲ್ಲಿದ್ದ ಎಲ್ಲ ಸ್ಫೋಟಕಗಳನ್ನು ಸ್ಫೋಟಿಸುವ ಮೂಲಕ ನಾಶಪಡಿಸಿದೆ ಎಂದು ತಿಳಿದು ಬಂದಿದೆ.

ವ್ಯಾಪಾರಿ ಹಡಗು ಎಂವಿ ಚೆಮ್ ಪ್ಲುಟೊಗೆ ಅಪ್ಪಳಿಸಿದ ಡ್ರೋನ್ ಅನ್ನು ಭಾರತೀಯ ನೌಕಾಪಡೆ ಸಿಬ್ಬಂದಿಗಳು ಪತ್ತೆ ಮಾಡಿದ್ದು, ಹೆಚ್ಚಿನ ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಭಾರತೀಯ ನೌಕಾಪಡೆಯು ಡ್ರೋನ್ ನ ಅವಶೇಷಗಳನ್ನು ಸಂಗ್ರಹಿಸಿತ್ತು. ಡ್ರೋನ್ ನಲ್ಲಿದ್ದ ಸ್ಫೋಟಕಗಳನ್ನು ಸೇನಾಧಿಕಾರಿಗಳು ನಾಶಪಡಿಸಿದ್ದಾರೆ. ಭಾರತದ ಪಶ್ಚಿಮ ಕರಾವಳಿಯಿಂದ 400 ಕಿಮೀ ದೂರದಲ್ಲಿ ಪಯಣಿಸುತ್ತಿದ್ದ ವ್ಯಾಪಾರಿ ಹಡಗು ಎಂವಿ ಚೆಮ್ ಪ್ಲುಟೊಗೆ ಡ್ರೋನ್‌ ಅಪ್ಪಳಿಸಿತ್ತು.

ಈ ದಾಳಿ ಬೆನ್ನಲ್ಲೇ ಹಡಗಿನ ರಕ್ಷಣೆಗೆ ಧಾವಿಸಿದ್ದ ಭಾರತೀಯ ನೌಕಾದಳ ಹಡಗಿಗೆ ಅಪ್ಪಳಿಸಿದ್ದ ಡ್ರೋನ್ ನ ಜಾಡು ಹಿಡಿದು ತನಿಖೆ ನಡೆಸಿತ್ತು. ಈ ವೇಳೆ ಪತ್ತೆಯಾದ ಡ್ರೋನ್ ನ ಅವಶೇಷಗಳನ್ನು ಈಗ ಮುಂಬೈನಲ್ಲಿರುವ ಸ್ಯಾನಿಟೈಸೇಶನ್ ಮತ್ತು ಪ್ರಾಥಮಿಕ ವಿಶ್ಲೇಷಣೆಗೊಳಪಡಿಸಿತ್ತು. ನಂತರ, ಸ್ಫೋಟಕ ಆರ್ಡನೆನ್ಸ್ ವಿಲೇವಾರಿ ತಜ್ಞರು ಡ್ರೋನ್‌ನಲ್ಲಿನ ಸ್ಫೋಟಕ “ಸಂಪೂರ್ಣವಾಗಿ ಸ್ಫೋಟಗೊಂಡು ವಾಟರ್‌ಲೈನ್‌ನ ಮೇಲೆ ವ್ಯಾಪಕ ಹಾನಿಯನ್ನುಂಟುಮಾಡಿತು” ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು