Categories: ದೆಹಲಿ

ಭಾರತ ಇಟಲಿ ನಡುವೆ ಬಹುದೊಡ್ಡ ಒಪ್ಪಂದಕ್ಕೆ ಒಪ್ಪಿಗೆ

ನವದೆಹಲಿ: ಇಟಲಿಯಲ್ಲಿ ಬಲಪಂಥೀಯ ಸರ್ಕಾರವಿದೆ. ಇತ್ತೀಚೆಗೆ ಇಟಲಿ ಚೀನಾದ ಸಹವಾಸ ಬಿಟ್ಟು ಭಾರತದ ತೆಕ್ಕೆಗೆ ಬಿದ್ದಿದೆ. ಡಿ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಭಾರತ ಮತ್ತು ಇಟಲಿ ನಡುವಿನ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಗೂ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಇದು ‘ಮೆಲೋಡಿ’ ಯುಗದ ಗೆಲುವು. ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಯುಗ ಆರಂಭ ಎಂದು ಹೇಳಲಾಗಿದೆ.

ಈ ಒಪ್ಪಂದವು ಜನರ ಸಂಪರ್ಕವನ್ನು ಹೆಚ್ಚಿಸುತ್ತದೆ, ವಿದ್ಯಾರ್ಥಿಗಳು, ನುರಿತ ಕೆಲಸಗಾರರು, ವ್ಯಾಪಾರಸ್ಥರು ಮತ್ತು ಯುವ ವೃತ್ತಿಪರರ ಚಲನಶೀಲತೆಯನ್ನು ಉತ್ತೇಜಿಸುತ್ತದೆ. ಹಾಗೂ ಅನಿಯಮಿತ ವಲಸೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಹಕಾರವನ್ನು ಬಲಪಡಿಸುತ್ತದೆ ಎಂದು ಹೇಳಲಾಗಿದೆ. ವಲಸೆ ಮತ್ತು ಚಲನಶೀಲತೆಯ ಕುರಿತಾದ ಭಾರತ-ಇಟಲಿ ಒಪ್ಪಂದವು ಐದು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಇದು ಯಾವುದೇ ಸರ್ಕಾರ ಬದಲಾವಣೆಯಾದರೂ ಮುಂದುವರಿಯುತ್ತದೆ ಎಂದು ಹೇಳಿದೆ. ಈಗಾಗಲೇ ಈ ಒಪ್ಪಂದ ಪ್ರಕಾರ ಅನೇಕ ವಿಚಾರಗಳನ್ನು ನವೀಕರಿಸಲಾಗಿದೆ. ಪ್ರಸ್ತುತ ಇಟಾಲಿಯನ್ ವೀಸಾ ಆಡಳಿತದಲ್ಲಿ ಪೋಸ್ಟ್-ಸ್ಟಡಿ ಅವಕಾಶಗಳು, ಇಂಟರ್ನ್‌ಶಿಪ್‌ಗಳು ಮತ್ತು ವೃತ್ತಿಪರ ತರಬೇತಿಗಾಗಿ ಕಾರ್ಯವಿಧಾನಗಳನ್ನು ಒಳಗೊಂಡಿದೆ.

ನವೆಂಬರ್ 2ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇಟಲಿಯ ವಿದೇಶಾಂಗ ವ್ಯವಹಾರಗಳು ಹಾಗೂ ಅಂತರಾಷ್ಟ್ರೀಯ ಸಹಕಾರ ಸಚಿವ ಆಂಟೋನಿಯೊ ತಜಾನಿ ಇಟಲಿಯಲ್ಲಿ ಭೇಟಿಯಾದರು, ಈ ಸಂದರ್ಭದಲ್ಲಿ ಇಬ್ಬರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದೀಗ ಈ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಇಟಲಿಯಲ್ಲಿ ಭಾರತೀಯರು ಶೈಕ್ಷಣಿಕ/ವೃತ್ತಿಪರ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಆರಂಭಿಕ ವೃತ್ತಿಪರ ಅನುಭವವನ್ನು ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳು 12 ತಿಂಗಳವರೆಗೆ ಇಟಲಿಯಲ್ಲಿ ತಾತ್ಕಾಲಿಕ ನಿವಾಸ ಹಾಗೂ ವೀಸಾವನ್ನು ಪಡೆಯಬಹುದು. ಇದರ ಜತೆಗೆ ವೃತ್ತಿಪರ ತರಬೇತಿ, ಪಠ್ಯೇತರ ಇಂಟರ್ನ್‌ಶಿಪ್‌ಗಳು ಮತ್ತು ಪಠ್ಯಕ್ರಮ ಇಂಟರ್ನ್‌ಶಿಪ್‌ಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಹೊಂದಿದೆ. ಇದು ಭಾರತೀಯ ವಿದ್ಯಾರ್ಥಿಗಳು/ತರಬೇತಿದಾರರು ಇಟಾಲಿಯನ್ ಕೌಶಲ್ಯ/ತರಬೇತಿ ಮಾನದಂಡಗಳಲ್ಲಿ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

Gayathri SG

Recent Posts

ಆಮ್ ಆದ್ಮಿ ಪಕ್ಷಕ್ಕೆ 7 ಕೋಟಿ ರೂ ವಿದೇಶಿ ಫಂಡಿಂಗ್: ತನಿಖೆ ಕೋರಿ ಗೃಹ ಸಚಿವಾಲಯಕ್ಕೆ ಇಡಿ ಪತ್ರ

ಆಮ್ ಆದ್ಮಿ ಪಕ್ಷಕ್ಕೆ  ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ…

1 hour ago

ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…

2 hours ago

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

2 hours ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

2 hours ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

3 hours ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

3 hours ago