News Karnataka Kannada
Friday, May 03 2024
ದೆಹಲಿ

ಐಟಿ ದಾಳಿ: 94 ಕೋಟಿ ರೂ. ನಗದು, ಚಿನ್ನಾಭರಣಗಳ ವಶ

I-T raids: Rs 94 crore seized Cash, gold ornaments seized
Photo Credit : IANS

ನವದೆಹಲಿ: ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಐಟಿ ದಾಳಿ ಭಾರಿ ಸುದ್ದಿ ಮಾಡಿತ್ತು. ಬಿಜೆಪಿ ಈ ಹಣ ಪಂಚರಾಜ್ಯ ಚುನಾವಣೆಗಾಗಿ ಸಂಗ್ರಹಿಸಿರುವ ಅಕ್ರಮ ಫಂಡ್‌ ಎಂದು ಹೇಳಿತ್ತು. ಕಾಂಗ್ರೆಸ್‌ ನಾಯಕರು ಆದಾಯ ತೆರಿಗೆ ಇಲಾಖೆ ಬಿಜೆಪಿ ಮುಖಂಡರ ಮನೆ ಮೇಲೇಕೆ ದಾಳಿ ನಡೆಸಲ್ಲ ಎಂದು ಪ್ರಶ್ನೆ ಮಾಡಿತ್ತು. ಇದೀಗ ದಾಳಿ ಕುರಿತು ಆದಾಯ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕ ಮತ್ತು ಕೆಲವು ಇತರ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು (ಐಟಿ ಇಲಾಖೆ) 94 ಕೋಟಿ ರೂ. ನಗದು, 8 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು ವಿದೇಶಿ ನಿರ್ಮಿತ 30 ಐಷಾರಾಮಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಸಿಬಿಡಿಟಿ ಸೋಮವಾರ ತಿಳಿಸಿದೆ.

ಅಕ್ಟೋಬರ್ 12ರಂದು ಐಟಿ ಅಧಿಕಾರಿಗಳು ವಿವಿಧ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದರು ಮತ್ತು ಶೋಧ ಕಾರ್ಯ ಪ್ರಾರಂಭಿಸಿದರು. ಬೆಂಗಳೂರು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ದೆಹಲಿಯ ಕೆಲವು ನಗರಗಳಲ್ಲಿ ಇಲಾಖೆಯು ಒಟ್ಟು 55 ಕಡೆಗಳಲ್ಲಿ ದಾಳಿ ನಡೆಸಿದೆ.

‘ಈ ವೇಳೆ ಅಂದಾಜು 94 ಕೋಟಿ ರೂ. ನಗದು ಮತ್ತು 8 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.

ಇದಲ್ಲದೆ, ಶೋಧದ ಸಮಯದಲ್ಲಿ, ವಾಚ್‌ಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿರದ ಖಾಸಗಿ ಉದ್ಯೋಗಿ ಬಳಿ ವಿದೇಶಿ ನಿರ್ಮಿತ ಸುಮಾರು 30 ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು