ನವದೆಹಲಿ: ಜಿ 20 ಶೃಂಗಸಭೆ ಇಂದಿನಿಂದ 2 ದಿನಗಳ ಕಾಲ ನಡೆಯಲಿದ್ದು, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಅನೇಕ ವಿಶ್ವ ನಾಯಕರ ದೆಹಲಿಗೆ ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ವೇಳಾಪಟ್ಟಿ ಹೇಗಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಸೆಪ್ಟೆಂಬರ್ 9ರಂದು 9.30ರಿಂದ 10.30ರವರೆಗೆ ಭಾರತ ಮಂಟಪದ ಶೃಂಗಸಭೆಯ ಸ್ಥಳದಲ್ಲಿ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ. ಭಾರತ್ ಮಂಟಪದಲ್ಲಿ ಪ್ರಧಾನ ಮಂತ್ರಿ ಜೊತೆ ಸ್ವಾಗತ ಫೋಟೋಶೂಟ್.
10.30-1.30ರವರೆಗೆ ಸೆಷನ್ 1: ಶೃಂಗಸಭೆ ಸಭಾಂಗಣದಲ್ಲಿ ಒಂದು ಭೂಮಿ ಕುರಿತು ಸಮಾವೇಶ.
* 1.30-3.00ರವರೆಗೆ ಭಾರತ ಮಂಟಪದಲ್ಲಿ ದ್ವಿಪಕ್ಷೀಯ ಸಭೆಗಳು.
* 3.00-4.45ರವರೆಗೆ ಸೆಷನ್ II: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪದ ಹಂತ 1ರಲ್ಲಿ ಒಂದು ಕುಟುಂಬ ಕುರಿತು ಸಮಾವೇಶ. ನಂತರ ಹೋಟೆಲ್ಗಳಿಗೆ ಅಥಿತಿಗಳ ನಿರ್ಗಮನ.
* 7.00-8.00ರವರೆಗೆ ಭೋಜನಕ್ಕೆ ವಿಶ್ವ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ. ಆಗಮನದ ಫೋಟೋ ಶೂಟ್
* 8.00-9.15 ಊಟದ ನಡುವೆ ಸಂಭಾಷಣೆ.
* 9.10-9.45ರವರೆಗೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಲೀಡರ್ಸ್ ಲಾಂಜ್, ಭಾರತ ಮಂಟಪದ ಲೆವೆಲ್ 2 ನಲ್ಲಿ ಸೇರುತ್ತಾರೆ. ನಂತರ ದಕ್ಷಿಣ ಅಥವಾ ಪಶ್ಚಿಮ ಪ್ಲಾಜಾದಿಂದ ಹೋಟೆಲ್ಗಳಿಗೆ ನಿರ್ಗಮನ.
G20 ಶೃಂಗಸಭೆ ದಿನ 2: ಸೆಪ್ಟೆಂಬರ್ 10 ಸಮಯದ ಚಟುವಟಿಕೆ
* 8.15ರಿಂದ 9.00ರವರೆಗೆ ರಾಜ್ಘಾಟ್ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ.
ರಾಜ್ಘಾಟ್ನಲ್ಲಿರುವ ನಾಯಕರ ಲಾಂಜ್ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುತ್ತಾರೆ.
* 9.00-9.20ರ ನಡುವೆ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ. ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಪ್ರದರ್ಶನ
*9.20ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಲೌಂಜ್ಗೆ ತೆರಳುತ್ತಾರೆ. ಅಲ್ಲಿಂದ ಪ್ರತ್ಯೇಕ ಮೋಟರ್ಕೇಡ್ಗಳಲ್ಲಿ ಭಾರತ ಮಂಟಪಕ್ಕೆ ನಿರ್ಗಮನ.
* 9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.
* 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಮರ ನೆಡುವ ಕಾರ್ಯಕ್ರಮ.
* 10.30-12.30ರವರೆಗೆ ಸೆಷನ್ III: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪ ಹಂತ 2ರಲ್ಲಿ ಒಂದು ಭವಿಷ್ಯ ಕುರಿತು ಸಮಾವೇಶ.