ಹೊಸದಿಲ್ಲಿ: ಹೊಸ ಬೆಳವಣಿಗೆಯೊಂದರಲ್ಲಿ ಗೂಗಲ್ ನ್ಯೂಸ್ ನಲ್ಲಿ ಗುಜರಾತಿ, ಪಂಜಾಬಿ ಭಾಷೆಯನ್ನು ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಭಾರತದ 10 ಭಾಷೆಗಳಲ್ಲಿ ಗೂಗಲ್ ನ್ಯೂಸ್ ದೊರೆಯಲಿದೆ. ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ Google News ದೊರೆಯುತ್ತಿದೆ.
ಈ ಭಾಷಾ ಸುದ್ದಿ ಜಾಲದ ವಿಸ್ತರಣೆ ಗೂಗಲ್ ಬದ್ಧತೆಯನ್ನು ಪುನರುಚ್ಚೃಿಸಿದೆ ಎಂದು ಗೂಗಲ್ ಹೇಳಿದೆ. “ಗೂಗಲ್ ನ್ಯೂಸ್ನಲ್ಲಿ ಭಾರತೀಯ ಭಾಷೆಗಳ ಸೇರ್ಪಡೆಯಿಂದ ಹೆಚ್ಚು ಹೆಚ್ಚು ಬಳಕೆದಾರರು ರಾಷ್ಟ್ರ, ರಾಜ್ಯದ ಆಗುಹೋಗು ವಿವರ ಪಡೆಯುವುದು ಸುಲಭವಾಗುತ್ತದೆ ಎಂದು ಗೂಗಲ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.