News Karnataka Kannada
Tuesday, April 30 2024
ದೆಹಲಿ

ಗ್ರೇಟ್ ಇಂಡಿಯನ್ ತಮಾಶಾ ಕಂಪೆನಿಯ ಕೊಡಗಿನ ಕಾಫಿ ತೋಟವನ್ನು ಹರಾಜಿಗಿಟ್ಟ ಬ್ಯಾಂಕ್

Untitled 1 Recovered
Photo Credit :

ನವದೆಹಲಿ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬ್ಯಾಂಕ್ ಗಳಿಗೆ  ವಂಚಿಸುವ  ಪ್ರಕರಣಗಳು  ಬ್ಯಾಂಕ್ ಗಳನ್ನೇ ಅನುಮಾನಿಸುವಂತೆ ಮಾಡುತ್ತಿವೆ. ಕಾರ್ಪೊರೇಟ್  ವಲಯವು , ಉದ್ಯಮಿಗಳು ಬ್ಯಾಂಕ್ ಗಳಿಂದ  ನೂರಾರು ಕೋಟಿ ರೂಪಾಯಿಗಳ ಸಾಲ ಪಡೆದು ನಂತರ  ಕೈ ಎತ್ತುವ ಪ್ರಕರಣಗಳಿಗೆ ದೇಶದಲ್ಲಿ ನೂರಾರು ಉದಾಹರಣೆ ಇದ್ದರೆ ಮತ್ತೊಂದೆಡೆ  ಜನಸಾಮಾನ್ಯರು  ಪಡೆದ ಸಾಲಗಳನ್ನು ಬ್ಯಾಂಕಿನವರು  ಮುಲಾಜಿಲ್ಲದೆ ವಸೂಲಿ ಮಾಡುತಿದ್ದಾರೆ.

ಈ ಕೆಟ್ಟ ಸಾಲಗಳಿಗೆ ಹೊಸತೊಂದು ಸೇರ್ಪಡೆ   ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪೆನಿ ಮತ್ತು ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪೆನಿಗಳಾಗಿವೆ. ಈ ಎರಡೂ ಕಂಪೆನಿಗಳು  ಐಡಿಬಿಐ ಹೆಚ್ಡಿಎಫ್ಸಿ ಮತ್ತು ಬ್ಯಾಂಕ್ ಆಪ್ ಬರೋಡ  ಬ್ಯಾಂಕ್ ಗಳ ದೆಹಲಿ ಶಾಖೆಯಿಂದ ಪಡೆದಿರುವ ಸಾಲವು ಸುಸ್ತಿ ಆಗಿದ್ದು ಈ ಅನುತ್ಪಾದಕ ಸಾಲಗಳ ಒಟ್ಟು ಮೊತ್ತ 148 ಕೋಟಿ
ರೂಪಾಯಿಗಳಾಗಿವೆ.

ಐಡಿಬಿಐ ಬ್ಯಾಂಕ್  ಈ ಕಂಪೆನಿಗೆ  ಸೇರಿದ ಆಸ್ತಿಯನ್ನು ಹರಾಜು ಹಾಕಲು ಮುಂದಾಗಿದ್ದು ಈಗಾಗಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.   ಈ ಹರಾಜು ಪ್ರಕಟಣೆಯು  ಸೋಷಿಯಲ್ ಮೀಡಿಯಾಗಳಲ್ಲಿ  ಭಾರೀ ಚರ್ಚೆಗೆ ಗ್ರಾಸವಾಗಿದ್ದು ಈ ಕಂಪೆನಿಗಳ ಹೆಸರುಗಳು  ನೆಟ್ಟಿಗರ ಗೇಲಿಗೆ ಕಾರಣವಾಗಿವೆ.  ಅತ್ಯಂತ ಜವಾಬ್ದಾರಿಯಿಂದ  ಸಾಲ ನೀಡಬೇಕಾದ ಬ್ಯಾಂಕುಗಳು
ಸಾಲ ನೀಡುವಲ್ಲಿ ಎಡವಿದವೇ ಎಂಬ ಪ್ರಶ್ನೆ ಎದ್ದಿದೆ. ದಿ ಗ್ರೇಟ್ ಇಂಡಿಯನ್ ನೌಟಂಕಿ ಎಂಬ ಕಂಪೆನಿಯು  ಮೇಲಿನ ಮೂರು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದು ಇದಕ್ಕೆ ಜಾಮೀನುದಾರರಾಗಿ  ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಯ  ಆಸ್ತಿಗಳನ್ನು ನೀಡಿದೆ. ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಗೆ    ಅನುಮೋದ್ ಶರ್ಮಾ,  ಡಾ ಅನು ಅಪ್ಪಯ್ಯ, ಸಂಜಯ್ ಚೌಧರಿ, ವಿರಾಫ್ ಸರ್ಕಾರಿ, ಎಂಬುವವರು ನಿರ್ದೇಶಕರಾಗಿದ್ದು ಇವರು ಸಾಲಕ್ಕೆ ಜಾಮೀನುದಾರರೂ ಆಗಿದ್ದಾರೆ.  ಈ ಕಂಪೆನಿ ಕೊಡಗಿನ  ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೇರೂರು ಗ್ರಾಮದ ಸರ್ವೆ ನಂಬರ್  7/5, 7/1, 7/3, 7/5 ಹಾಗೂ ಸರ್ವೆ ನಂಬರ್ 6 ಮತ್ತು 4 ರಲ್ಲಿ ಒಟ್ಟು 107.24 ಎಕರೆ ಕಾಫಿ ತೋಟ  ಹೊಂದಿದೆ.  ಈಗ ಐಡಿಬಿಐ ಬ್ಯಾಂಕ್  ಈ ಆಸ್ತಿಗಳನ್ನು 27-7-2022 ರಂದು  ಆನ್ ಲೈನ್  ಹರಾಜಿಗೆ ಇಟ್ಟಿದೆ.   ಈ ಆಸ್ತಿಗಳನ್ನು  16-7-2022 ರಂದು  ಬಿಡ್ ದಾರರಿಗೆ ಪರಿಶೀಲಿಸುವ  ಅವಕಾಶ ನೀಡಲಾಗಿದೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯು ಐಡಿಬಿಐ ಬ್ಯಾಂಕ್ಗೆ 86.48 ಕೋಟಿ ರೂ., ಎಚ್ಡಿಎಫ್ಸಿ ಬ್ಯಾಂಕ್ಗೆ 6.26 ಕೋಟಿ ರೂ. ಮತ್ತು ಬ್ಯಾಂಕ್ ಆಫ್ ಬರೋಡಾಕ್ಕೆ 49.23 ಕೋಟಿ ರೂ. ಸಾಲ  ಮತ್ತು ಬಡ್ಡಿಯನ್ನು ಬಾಕಿ  ಉಳಿಸಿಕೊಂಡಿದ್ದು  ಈಗ ಕಾಪಿ ತೋಟಗಳನ್ನು ಹರಾಜು ಹಾಕುವ ಮೂಲಕ ಸಾಲ ವಸೂಲಾತಿಗೆ ಮುಂದಾಗಿದೆ.  ಈ ಆಸ್ತಿಗಳಿಗೆ 11.53  ಕೋಟಿ ರೂಪಾಯಿಗಳ ಮೀಸಲು ಬೆಲೆಯನ್ನೂ ನಿಗದಿಪಡಿಸಿದೆ.  ಈ ವರದಿಗಾರ ಆಸ್ತಿಗಳ ಆರ್ಟಿಸಿ ಯನ್ನು ಪರಿಶೀಲಿಸಿದಾಗ ಅವೆಲ್ಲವೂ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪೆನಿಯ
ಹೆಸರಿನಲ್ಲಿವೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯನ್ನು ಸೆಪ್ಟೆಂಬರ್ 2007 ರಲ್ಲಿ ದೆಹಲಿಯಲ್ಲಿ ನೋಂದಾಯಿತ ಕಚೇರಿಯೊಂದಿಗೆ ಸ್ಥಾಪಿಸಲಾಗಿದೆ.  ಇದು ಭಾರತೀಯ ಸಂಸ್ಕೃತಿ ಮತ್ತು ಪ್ರದರ್ಶನ ಕಲೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮನರಂಜನಾ ಸ್ಥಳಗಳು ಮತ್ತು ಪ್ರದರ್ಶನಗಳನ್ನು  ಆಯೋಜನೆ ಮಾಡುವ ಚಟುವಟಿಕೆ ನಡೆಸುವುದಾಗಿ   ಕಂಪೆನಿ ಸಚಿವಾಲಯಕ್ಕೆ ಮಾಹಿತಿ ನೀಡಿದೆ. ಕಂಪೆನಿಯು  ಕಿಂಗ್ಡಮ್ ಆಫ್ ಡ್ರೀಮ್ಸ್, ನೌಟಂಕಿ ಮಹಲ್ ಮತ್ತು ಕಲ್ಚರ್ ಗಲ್ಲಿ  ಎಂಬ ಪ್ರದರ್ಶನ ನೀಡುವುದಾಗಿ ಹೇಳಿಕೊಂಡಿದೆ. ಇನ್ನು  ಜನವರಿ 2008 ರಲ್ಲಿ ಸ್ಥಾಪಿಸಲಾದ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪನಿಯು ರೂ 2 ಕೋಟಿ ರೂಪಾಯಿಗಳ ಅಧಿಕೃತ ಷೇರು ಬಂಡವಾಳದೊಂದಿಗೆ ಸರ್ಕಾರೇತರ ಕಂಪನಿ ಎಂದು ವರ್ಗೀಕರಿಸಲ್ಪಟ್ಟಿದೆ ಮತ್ತು ಅದರ ಪಾವತಿಸಿದ ಬಂಡವಾಳವು ರೂ 2 ಲಕ್ಷವಾಗಿದೆ. ಈ ಕಂಪೆನಿಗಳ ಹೆಸರುಗಳೇ ಗೇಲಿಗೆ ಕಾರಣವಾಗಿದ್ದು  ಬ್ಯಾಂಕ್ ಗಳ ವಿಶ್ವಾಸಾರ್ಹತೆ ಬಗ್ಗೆ   ಸಾರ್ವಜನಿಕರು ಸಂದೇಹ ಪಡುವಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು