ನವದೆಹಲಿ: 75 ಗಣರಾಜ್ಯೋತ್ಸವ ಅಂಗವಾಗಿ ಗೂಗಲ್ ಕೂಡ ವಿಶೇಷ ಡೂಡಲ್ ಮೂಲಕ ದೇಶದ ಜನತೆಗೆ ಶುಭ ಕೋರಿದೆ. ಅನಲಾಗ್ ಟಿವಿಗಳ ಯುಗದಿಂದ ಸ್ಮಾರ್ಟ್ಫೋನ್ಗಳ ಬಳಕೆಯವರೆಗೆ ದೇಶ ಪರಿವರ್ತನೆಯಾದ ಕಾಲಘಟ್ಟದ ಬಗ್ಗೆ ಗೂಗಲ್ ಹಂಚಿಕೊಂಡಿದೆ.
ಕಾಲ ಕಳೆದಂತೆ ಕಪ್ಪು–ಬಿಳಿಯ ಟಿವಿ ಪರದೆಗಳು ಬಣ್ಣದ ಟಿವಿಗಳಾಗಿವೆ. ಅದರ ನೋಡುಗರು ಮಾತ್ರ ಅದೇ ಹೆಮ್ಮೆಯಿಂದ ವೀಕ್ಷಿಸುತ್ತಿದ್ದಾರೆ ಎಂದು ಗೂಗಲ್ ಬರೆದುಕೊಂಡಿದೆ.
‘ಈ ಡೂಡಲ್ ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ, ಇದು 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ನೆನಪಿಸುತ್ತದೆ ಮತ್ತು ರಾಷ್ಟ್ರವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿದ ದಿನ’ ಎನ್ನುವ ಮಾಹಿತಿಯನ್ನು ಡೂಡಲ್ನಲ್ಲಿ ವಿವರಿಸಿದೆ.
From black & white to colorful screens 📺🤳
Times changed, but the pride of watching the parade together remains the same ❤️🇮🇳
Today's #GoogleDoodle wishes everyone a Happy Republic Day & celebrate this historic day through the years 🚀 pic.twitter.com/a94oJiC918— Google India (@GoogleIndia) January 25, 2024