ಲಕ್ನೋ: 17 ವರ್ಷದ ಮಾಡೆಲ್ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಮೊರಾದಾಬಾದ್ನ ಹೋಟೆಲ್ನಲ್ಲಿ ನಡೆದಿದೆ. ಭರತ್ ಸಿಂಗ್, ಅನಿಲ್ ಮತ್ತು ವಸೀಂ ಅಲಿಯಾಸ್ ಸೋನು ಬಂಧಿತ ಆರೋಪಿಗಳು.
ಸಂತ್ರಸ್ತ ಮಾಡೆಲ್ ತನಿಖಾ ಅಧಿಕಾರಿ ಉಷಾ ಮಲಿಕ್ ಅವರಿಗೆ ಮಾಹಿತಿ ನೀಡಿದ್ದಾಳೆ. ತನ್ನ ಮೂವರು ಸ್ನೇಹಿತರು ಕಾರಿನಲ್ಲಿ ಹೊಸದಿಲ್ಲಿಯಿಂದ ಮೊರಾಡಾಗೆ ಕರೆದುಕೊಂಡು ಹೋದರು. ಕಾರಿನಲ್ಲೂ ಅಸಭ್ಯವಾಗಿ ವರ್ತಿಸಿದ್ದು ನಂತರ ಹೊಟೇಲ್ಗು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ದೂರು ನೀಡಿದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಮಾಡೆಲ್ ನೀಡಿದ ಹೇಳಿಕೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ಗಳ ಅಡಿಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಂಭಾಲ್ನ ಬಾಲಕಿ ಜೈಪುರಕ್ಕೆ ಮಾಡೆಲಿಂಗ್ ನಿಯೋಜನೆಗಾಗಿ ಬಂದಿದ್ದಳಂತೆ. ಹೀಗಾಗಿ ದೆಹಲಿಗೆ ಬಂದು ಧೌಲಾ ಕುವಾನ್ ಮೆಟ್ರೋ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಳಂತೆ. ಈ ವೇಳೆ ಕಾರಿನಲ್ಲಿ ಬಂದ ಮೂವರು ಸ್ನೇಹಿತರು ಲಿಫ್ಟ್ ನೀಡುವುದಾಗಿ ಹೇಳಿದ್ದಾರೆ. ಪರಿಚಯ ಇದ್ದ ಕಾರಣ ಕಾರು ಬಾಲಕಿ ಕಾರು ಹತ್ತಿದ್ದಾಳೆ ಈ ವೇಳೆ ಅವರು ಅಸಭ್ಯವಾಗಿ ವರ್ತಿಸುವುದಲ್ಲದೆ , ಅತ್ಯಾಚಾರವೆಸಗಿದ್ದಾರೆ.