News Karnataka Kannada
Sunday, April 28 2024
ದೆಹಲಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಬಜೆಟ್‌ನತ್ತ ಇಡೀ ದೇಶದ ಚಿತ್ತ

ಲೋಕಸಭಾ ಚುನಾವಣೆಗೂ ಮುನ್ನ ಕೊನೆಯ ಬಜೆಟ್‌ ಮಂಡಿಸಲು ಮೋದಿ ಸರ್ಕಾರ ಸಜ್ಜಾಗಿದೆ. ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಏನೆಲ್ಲ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿದೆ. ನಿರ್ಮಲಾ ಸೀತಾರಾಮನ್‌ರ ಲೆಕ್ಕದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ.
Photo Credit : News Kannada

ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಕೊನೆಯ ಬಜೆಟ್‌ ಮಂಡಿಸಲು ಮೋದಿ ಸರ್ಕಾರ ಸಜ್ಜಾಗಿದೆ. ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಏನೆಲ್ಲ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿದೆ. ನಿರ್ಮಲಾ ಸೀತಾರಾಮನ್‌ರ ಲೆಕ್ಕದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ.

ಲೋಕಸಮರದ ಸನಿಹದಲ್ಲಿ ಕೇಂದ್ರ ಸರ್ಕಾರ ಇವತ್ತು ಮಧ್ಯಂತರ ಬಜೆಟ್​ ಮಂಡನೆ ಮಾಡಲಿದೆ. ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಸರ್ಕಾರದ ಮಧ್ಯಂತರ ಬಜೆಟ್‌ ಮೇಲೆ ದೇಶದ ಚಿತ್ತ ನೆಟ್ಟಿದೆ. ಮಧ್ಯಂತರ ಬಜೆಟ್​ನಲ್ಲಿ ದೇಶಕ್ಕೆ ಪೂರಕವಾದ ಘೋಷಣೆಗಳು ಆಗುತ್ತಾ ಎಂಬ ಆಶಾವಾದ ಜನರಲ್ಲಿ ಮೂಡಿದೆ.

ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಶುರುವಾಗಲಿದೆ. ಕೇಂದ್ರ ಬಜೆಟ್​ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಸೃಷ್ಟಿಸಲಿದ್ದಾರೆ. ಸತತ 6 ವರ್ಷ ಬಜೆಟ್​ ಮಂಡಿಸುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ದಾಖಲೆಯನ್ನ ಸರಿಗಟ್ಟಲಿದ್ದಾರೆ. ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಮೇಲೆ ದೇಶದ ಜನರ ನಿರೀಕ್ಷೆ ಹೆಚ್ಚಾಗಿದೆ. ದೇಶದ ತೆರಿಗೆದಾರರಿಗೆ ಏನಾದ್ರು ಗುಡ್‌ನ್ಯೂಸ್‌ ಸಿಗುತ್ತಾ ಎಂಬ ಆಶಾವಾದ ಹೆಚ್ಚಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು