ಹೊಸದಿಲ್ಲಿ: ಭಾರತದ ತಾಂತ್ರಿಕ ಉನ್ನತಿಗೆ ಕೃತಕ ಬುದ್ಧಿಮತ್ತೆಯ (ಎಐ) ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್ ಅವರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಹೀಗೆ ಟ್ವಿಟರ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್ ಭೇಟಿ ಸಂತಸ ತಂದಿದೆ.
ಭಾರತದ ಯುವಜನತೆಗೆ ಎಐ ತಂತ್ರಜ್ಞಾನ ಬಹುವಾಗಿ ನೆರವಾಗಲಿದ ಎಂಬ ವಿಶ್ವಾಸವಿದೆ. ಅದೇ ರೀತಿ ಜನಸಮೂಹಕ್ಕೆ ಹೊಸ ತಂತ್ರಜ್ಞಾನ ವರವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ. “ನಮ್ಮ ನಾಗರಿಕರಿಗೆ ಡಿಜಿಟಲ್ ಜಗತ್ತಿನ ಪ್ರಯೋಜನಗಳನ್ನು ತಲುಪಿಸುವ ಪ್ರಯತ್ನವನ್ನು ನಾವು ಸ್ವಾಗತಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.
ದೆಹಲಿಯ ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ (ಐಐಐಟಿ-ದೆಹಲಿ) ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಲ್ಟ್ಮ್ಯಾನ್, ತಾನು ಪ್ರಧಾನಿ ಮೋದಿಯವರೊಂದಿಗೆ ಸಂವಾದ ನಡೆಸಿದ್ದು, ಪ್ರಧಾನಿ ಅವರ ಆಲೋಚನೆ, ಚಿಂತನೆ ಪ್ರಗತಿಪರವಾಗಿ ಎಂದು ಹೇಳಿದ್ದರು. ಈ ಕುರಿತು ಆಲ್ಟ್ಮನ್ ಟ್ವೀಟ್ ಮಾಡಿದ್ದನ್ನು ಸ್ಮರಿಸಬಹುದು.