ನವದೆಹಲಿ: ‘ಇಂಡಿಯಾ’ ಮೈತ್ರಿಕೂಟದ ಹೆಸರನ್ನು ‘ಭಾರತ’ ಎಂದು ಬದಲಾಯಿಸಿಕೊಂಡರೆ ಹೆಸರು ಮರುನಾಮಕರಣದಲ್ಲಿ ತೊಡಗಿರುವ ಆಡಳಿತರೂಢ ಬಿಜೆಪಿಯ ಬಾಲಿಶ ಆಟ ಕೊನೆಯಾಗಲಿದೆ’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಸಲಹೆ ನೀಡಿದ್ದಾರೆ.
ಸರ್ಕಾರ ‘ಭಾರತ-ಇಂಡಿಯಾ’ ವಿವಾದ ಸೃಷ್ಟಿಸಿದೆ. ಇದಕ್ಕೆ ವಿಪಕ್ಷಗಳು ಮೈತ್ರಿಕೂಟದ ಹೆಸರನ್ನು ‘ಭಾರತ’ ಎಂದು ಬದಲಾವಣೆ ಮಾಡುವುದು ಉತ್ತಮ. ಆಗಷ್ಟೇ ಬಿಜೆಪಿ ನಾಯಕರು ಸುಮ್ಮನಾಗುತ್ತಾರೆ’ ಎಂದು ಶಶಿ ತರೂರ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
We could of course call ourselves the Alliance for Betterment, Harmony And Responsible Advancement for Tomorrow (BHARAT).
Then perhaps the ruling party might stop this fatuous game of changing names.
— Shashi Tharoor (@ShashiTharoor) September 6, 2023