News Karnataka Kannada
Thursday, May 16 2024
ದೆಹಲಿ

ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-3

Chandrayaan-3
Photo Credit : Twitter

ನವದೆಹಲಿ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಆಗಸ್ಟ್ 5ರ ಸಂಜೆ 7.15ಕ್ಕೆ ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ. ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಉಡ್ಡಯನ ಮಾಡಲಾಗಿತ್ತು.

ಈ ವಾರದ ಆರಂಭದಲ್ಲಿ ಭೂಮಿಯಿಂದ ನಿರ್ಗಮಿಸಿದ ನಂತರ, ಚಂದ್ರಯಾನ-3 ಚಂದ್ರನ ಪ್ರಭಾವದ ಗೋಳವನ್ನು ಪ್ರವೇಶಿಸಿತ್ತು. ನಂತರ ಸುರಕ್ಷಿತವಾಗಿ ಚಂದ್ರನ ಸುತ್ತ ಸುತ್ತುತ್ತಿದೆ ಎಂದು ಇಸ್ರೋ ಖಚಿತಪಡಿಸಿತ್ತು. ನಿರೀಕ್ಷಿಸಿದಂತೆ, ಚಂದ್ರಯಾನ-3 ಈಗ ದೀರ್ಘವೃತ್ತದ ಮಾರ್ಗವನ್ನು ಅನುಸರಿಸುತ್ತಿದೆ, ಭೂಮಿಗೆ ಅದರ ಹತ್ತಿರದ ಬಿಂದು (ಪೆರಿಜಿ) ಮತ್ತು ಅತ್ಯಂತ ದೂರದ ಬಿಂದು (ಅಪೋಜಿ) ನಡುವೆ ಚಲಿಸುತ್ತಿದೆ ಎಂದು ಇಸ್ರೋ ಈ ಹಿಂದೆ ತಿಳಿಸಿತ್ತು.

ಚಂದ್ರಯಾನ 3, ಚಂದ್ರಯಾನ 2 ರಂತೆ ಯಾವುದೇ ಆರ್ಬಿಟರ್ ಹೊಂದಿಲ್ಲ. ಒಂದು ಲ್ಯಾಂಡರ್ ಮತ್ತು ಒಂದು ರೋವರ್ ಅನ್ನು ಹೊಂದಿದೆ. ಅಂದರೆ, ಭೂಮಿಯ ಲೆಕ್ಕಾಚಾರದಲ್ಲಿ 14 ದಿನಗಳು ಕಾರ್ಯಾಚರಿಸಲಿವೆ. ಒಂದು ಬಾರಿ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ, ರೋವರ್ ಅದರಿಂದ ಬಿಡುಗಡೆಯಾಗಿ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿ, ಪ್ರಯೋಗಗಳನ್ನು ನಡೆಸಿ, ಮಾಹಿತಿ ಕಲೆಹಾಕಲಿದೆ.

https://twitter.com/chandrayaan_3/status/1687831700452098048/photo/1

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು