ನವದೆಹಲಿ: ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವವರ ಆಸ್ತಿಗಳನ್ನು 24 ಗಂಟೆಯೊಳಗೆ ಮುಟ್ಟುಗೋಲು ಹಾಕಲು ಕೇಂದ್ರ ಸರ್ಕಾರ ಆದೇಶ ನೀಡಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹಲವು ಸಂಘಟನೆಗಳ ಹೆಸರು ಗುರುತಿಸಿದ್ದು, ಅದರ ಅನ್ವಯ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಯುಎನ್ಎಸ್ಸಿ ಗುರುತಿಸಿರುವ ಎಲ್ಲಾ ಬೆಂಬಲಿಗರ ಆಸ್ತಿಯನ್ನು ಯುಎಪಿಎ (UAPA) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅನ್ವಯ ಮುಂದಿನ 24 ಗಂಟೆಯೊಳಗೆ ಮುಟ್ಟುಗೋಲು ಹಾಕಿಕೊಳ್ಳುವಂತೆ ತನಿಖಾ ಸಂಸ್ಥೆಗಳು ಮತ್ತು ನಿಯಂತ್ರಣಾ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಹಣಕಾಸು ಗುಪ್ತಚರ ಇಲಾಖೆಯನ್ನು ಇದಕ್ಕೆ ನೋಡಲ್ ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿದ್ದು, ಅಕ್ರಮವನ್ನುಗುರುತಿಸುವ ಮತ್ತು ಕಾನೂನು ಕ್ರಮ ಜರುಗಿಸುವ ಅಧಿಕಾರ ನೀಡಲಾಗಿದೆ.