News Karnataka Kannada
Monday, April 29 2024
ದೆಹಲಿ

ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರದಿಂದ ಸೂಚನೆ

Centre asks media houses not to air betting advertisements
Photo Credit : IANS

ನವದೆಹಲಿ: ಬೆಟ್ಟಿಂಗ್ ಅಥವಾ ಜೂಜನ್ನು ಜಾಹೀರಾತು ಅಥವಾ ಇನ್ಯಾವುದೇ ರೂಪದಲ್ಲಾದರೂ ತೋರಿಸಬಾರದು ಎಂದು ಎಲ್ಲಾ ಮಾಧ್ಯಮಗಳಿಗೂ ಕೇಂದ್ರದಿಂದ ಸೂಚನೆ ರವಾನೆಯಾಗಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಸೂಚನೆಯು ಮುದ್ರಣ, ಟಿವಿ ಮಾಧ್ಯಮಗಳಿಂದ ಹಿಡಿದು ಸೋಷಿಯಲ್ ಮೀಡಿಯಾ ಸಂಸ್ಥೆಗಳು, ಜಾಹೀರಾತು ಸಂಸ್ಥೆಗಳವರೆಗೆ ಎಲ್ಲಾ ಮಾಧ್ಯಮಗಳಿಗೂ ಅನ್ವಯ ಆಗುತ್ತದೆ. ಯಾರಾದರೂ ಈ ಸಲಹೆಯನ್ನು ಧಿಕ್ಕರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಐಬಿ ಮಿನಿಸ್ಟ್ರಿ ಎಚ್ಚರಿಕೆ ನೀಡಿದೆ.

ಬೆಟ್ಟಿಂಗ್ ಮೊದಲಾದ ಜೂಜುಗಳಿಗೆ ಜಾಹೀರಾತು ನೀಡಲು ಕಪ್ಪುಹಣ ಬಳಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿರುವ ಮಾಹಿತಿ ಮತ್ತು ಪ್ರಸರಣ ಸಚಿವಾಲಯ, ಗ್ಯಾಂಬ್ಲಿಂಗ್ ಆ್ಯಪ್​ಗಳ ಬಳಕೆದಾರರಿಂದ ಸಂಗ್ರಹಿಸಲಾದ ಹಣವನ್ನು ಏಜೆಂಟ್​ಗಳು ಭಾರತದ ಹೊರಗೆ ಸಾಗಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿರುವ ವಿಚಾರವನ್ನು ಪ್ರಸ್ತಾಪಿಸಿದೆ. ಹಣದ ಅಕ್ರಮ ವರ್ಗಾವಣೆ ಜೊತೆಗೆ, ಗ್ಯಾಂಬ್ಲಿಂಗ್ ಆಟದಲ್ಲಿ ತೊಡಗುವ ಯುವಕರು ಮತ್ತು ಮಕ್ಕಳ ಹಣಕಾಸು ಮತ್ತು ಸಾಮಾಜಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಅದು ಎಚ್ಚರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು