News Karnataka Kannada
Thursday, May 02 2024
ದೆಹಲಿ

ಜಾಗತಿಕ ಆರ್ಥಿಕ ನೀತಿಗಳಲ್ಲಿ ಒಮ್ಮತ: ಬ್ರಿಕ್ಸ್‌ ರಾಷ್ಟ್ರಗಳ ಸಹಮತ

Brics nations agree on consensus on global economic policies
Photo Credit : IANS

ಹೊಸದಿಲ್ಲಿ: ಆರ್ಥಿಕ ನೀತಿಗಳಲ್ಲಿ ಜಾಗತಿಕ ಒಮ್ಮತವನ್ನು ನಿರ್ಮಿಸಲು ಬಹುಪಕ್ಷೀಯ ಹಣಕಾಸು ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ರಚನಾತ್ಮಕ ಪಾತ್ರವನ್ನು ವಹಿಸಬೇಕು ಎಂದು ಬ್ರಿಕ್ಸ್ ರಾಷ್ಟ್ರಗಳು ಗುರುವಾರ ಕರೆ ನೀಡಿವೆ.

ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ, ಆರ್ಥಿಕ ವಿಘಟನೆಯಿಂದ ಉಂಟಾಗುವ ಅಪಾಯ ದೂರಮಾಡಲು ಒಗ್ಗಟ್ಟು ಅಗತ್ಯ. ವ್ಯಾಪಾರ, ಬಡತನ ನಿರ್ಮೂಲನೆಗೆ ಎಲ್ಲರೂ ಒಗ್ಗೂಡಿ ಸಾಗಬೇಕಿದೆ. ಆಹಾರ, ಇಂಧನ, ರಸಗೊಬ್ಬರಗಳು ಹವಾಮಾನ ಬದಲಾವಣೆ, ಶಿಕ್ಷಣ, ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ವಿಚಾರಗಳಲ್ಲಿ ಈಗಲೂ ಒಗ್ಗಟ್ಟು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪ್ರತಿ ದೇಶಗಳು ಚಿಂತಿಸಬೇಕಿದೆ ಎಂದು ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ಹೇಳಿವೆ.

“ಹೆಚ್ಚುತ್ತಿರುವ ಬಡ್ಡಿ ದರಗಳು ಮತ್ತು ಹಣಕಾಸು ಪರಿಸ್ಥಿತಿಯಿಂದ ಹಲವು ರಾಷ್ಟ್ರಗಳ ಪರಿಸ್ಥಿತಿ ಶೋಚನೀಯವಾಗಿದೆ. ಪ್ರತಿ ರಾಷ್ಟ್ರದ ಕಾನೂನುಗಳು ಮತ್ತು ಆಂತರಿಕ ಕಾರ್ಯವಿಧಾನಗಳನ್ನು ಗಣನೆಗೆ ತೆಗೆದುಕೊಳ್ಳುವಾಗ ಆರ್ಥಿಕ ಚೇತರಿಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಅಂತರರಾಷ್ಟ್ರೀಯ ಸಾಲದ ಕಾರ್ಯಸೂಚಿಯನ್ನು ಪರಿಗಣಿಸಬೇಕೆಂದು ಬ್ರಿಕ್ಸ್‌ ರಾಷ್ಟ್ರಗಳ ಒಕ್ಕೂಟ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು