News Karnataka Kannada
Wednesday, May 08 2024
ದೆಹಲಿ

ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ, ಮೇಘಾಲಯದಲ್ಲಿ ಎನ್‌ಪಿಪಿಗೆ ಬೆಂಬಲ

https://kannada.newskarnataka.com/karnataka/bengaluru/ramanagara/2023/03/03/238503/inauguration-of-new-government-district-hospital-in-ramanagara/
Photo Credit : News Kannada

ನವದೆಹಲಿ: ತ್ರಿಪುರಾ, ನಾಗಾಲ್ಯಾಂಡ್‌ಗಳಲ್ಲಿ ಬಿಜೆಪಿ ಅಧಿಕಾರ ಗಳಿಸಿಕೊಂಡಿದ್ದು, ಮೇಘಾಲಯದಲ್ಲಿ ಕೊನಾರ್ಡ್‌ ಸಂಗ್ಮಾ ನೇತೃತ್ವದ ನ್ಯಾಷನಲ್‌ ಪೀಪಲ್‌ ಪಾರ್ಟಿ ಜತೆಗೆ ಮರುಮೈತ್ರಿ ಸ್ಥಾಪಿಸಿ ಅಧಿಕಾರ ನಡೆಸುವುದು ಖಚಿತವಾಗಿದೆ.

ಇದರೊಂದಿಗೆ ಬಿಜೆಪಿ ಈಶಾನ್ಯದ 2 ರಾಜ್ಯಗಳಲ್ಲಿ ನೇರವಾಗಿ 5 ರಾಜ್ಯಗಳಲ್ಲಿ ಪರೋಕ್ಷವಾಗಿ ಆಡಳಿತ ಚುಕ್ಕಾಣಿ ಹಿಡಿದಂತಾಗಿದೆ.
ತ್ರಿಪುರಾ ಚುನಾವಣೆಯಲ್ಲಿ ಬಿಜೆಪಿ 60 ಕ್ಷೇತ್ರಗಳ ಪೈಕಿ ಏಕಾಂಗಿಯಾಗಿಯೇ 32 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

ನಾಗಾಲ್ಯಾಂಡ್‌ನಲ್ಲಿ ಆಡಳಿತಾರೂಢ ನ್ಯಾಷನಲ್‌ ಡೆಮಾಕ್ರಾಟಿಕ್‌ ಪ್ರೋಗ್ರೆಸಿವ್‌ ಪಾರಟಿ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಏರಲಿದೆ.

ಮೇಘಾಲಯದ ಒಟ್ಟು 60 ಕ್ಷೇತ್ರಗಳ ಪೈಕಿ 59ಕ್ಕೆ ಚುನಾವಣೆ ನಡೆದಿದ್ದು ಅತಂತ್ರ ಫಲಿತಾಂಶ ದೊರೆತಿದೆ. ಕೊನಾರ್ಡ್‌ ನೇತೃತ್ವದ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ 26 ಕ್ಷೇತ್ರಗಳಲ್ಲಿ ಗೆದ್ದಿದೆ. ಈಗ ಬಿಜೆಪಿ ಬೆಂಬಲದ ಜತೆಗೆ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು