ನವದೆಹಲಿ: ಪ್ರಸಿದ್ಧ ಆ್ಯಪಲ್ ಕಂಪೆನಿ ಇದೀಗ ಭಾರತೀಯ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ. ಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಆ್ಯಪಲ್ ಉತ್ಪನ್ನಗಳನ್ನು ತಯಾರಿಸಲಾಗುವ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಗಳನ್ನು ಕಟ್ಟಿ ಕೊಡಲು ಯೋಜಿಸಲಾಗಿದೆ.
ಆ್ಯಪಲ್ ಕಂಪೆನಿ ಅಡಿಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಆ್ಯಪಲ್ನಿಂದ ಭಾರತದಲ್ಲಿ ಒಂದೂವರೆ ಲಕ್ಷ ನೇರ ಉದ್ಯೋಗಿಗಳು ಸೃಷ್ಟಿಯಾಗಿವೆ. ಈ ಪೈಕಿ 78,000ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಅದರಲ್ಲೂ ತಮಿಳುನಾಡಿನಲ್ಲೇ 58,000 ರೆಸಿಡೆನ್ಷಿಯಲ್ ಯೂನಿಟ್ಗಳಿರಲಿವೆ ಎಂಬ ಮಾಹಿತಿ ದೊರಕಿದೆ.
ಈಗಾಗಲೇ ಚೀನಾ ಮತ್ತು ವಿಯೆಟ್ನಾಂನಲ್ಲೂ ಉದ್ಯೋಗಿಗಳಿಗೆ ವಸತಿ ವ್ಯವಸ್ಥೆಯ ನೀತಿಯನ್ನು ಅನುಸರಿಸುತ್ತಿದೆ. ಭಾರತದಲ್ಲಿ ಗುತ್ತಿಗೆ ಸರಬರಾಜುದಾರರಿದ್ದಾರೆ. ಫಾಕ್ಸ್ಕಾನ್, ಟಾಟಾ, ಪೆಗಾಟ್ರಾನ್ ಕಂಪನಿಗಳು ಐಫೋನ್ಗಳನ್ನು ಆ್ಯಪಲ್ಗಾಗಿ ತಯಾರಿಸಿಕೊಡುವ ಗುತ್ತಿಗೆ ಪಡೆದಿವೆ.ಫಿನ್ಲ್ಯಾಂಡ್ ಮೂಲದ ಸಾಲ್ಕಾಂಪ್ ಎಂಬ ಕಂಪನಿ ಐಫೋನ್ನ ಚಾರ್ಜರ್ ಅನ್ನು ಭಾರತದಲ್ಲಿ ತಯಾರಿಸುತ್ತದೆ.ಹೀಗೆ ಬೇರೆ ಬೇರೆ ಬಿಡಿ ಬಿಡಿ ಭಾಗಗಳನ್ನು ತಯಾರಿಸಿಕೊಡುವ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ವಸತಿ ವ್ಯವಸ್ಥೆಯನ್ನು ನೀಡಲು ಆ್ಯಪಲ್ ಸಂಸ್ಥೆ ಮುಂದಾಗಿದೆ.