News Karnataka Kannada
Saturday, May 18 2024
ದೆಹಲಿ

ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ವಿಪ್ರೋಗೆ ಅಪರ್ಣಾ ಐಯ್ಯರ್ ನೂತನ ಸಿಎಫ್ ಒ

Aparna Iyer is the new CFO of Wipro.
Photo Credit : News Kannada

ದೆಹಲಿ: ದೇಶದ  ಪ್ರತಿಷ್ಠಿತ ಐಟಿ ಕಂಪನಿಗಳಲ್ಲೊಂದಾದ ವಿಪ್ರೋ ನೂತನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ ಒ) ಅಪರ್ಣಾ ಐಯ್ಯರ್ ಗುರುವಾರ ನೇಮಕಗೊಂಡಿದ್ದಾರೆ. ಈ ಹಿಂದಿನ ಸಿಇಒ ಜತಿನ್ ಪ್ರವೀಣ್ ಚಂದ್ರ ದಲಾಲ್ ಇತ್ತೀಚೆಗಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2015ರಲ್ಲಿ ಸಿಎಫ್ ಒ ಆಗಿ ನೇಮಕಗೊಂಡಿದ್ದ ಜತಿನ್, ವಿಪ್ರೋ ಸಂಸ್ಥೆಯಲ್ಲಿ ಸುಮಾರು 21 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.

ಅಪರ್ಣಾ ವಿಪ್ರೋ ಎಕ್ಸಿಕ್ಯುಟಿವ್ ಬೋರ್ಡ್ಗೆ ಸೇರಲಿದ್ದಾರೆ. ಅಪರ್ಣಾ 2013ರಲ್ಲಿ ವಿಪ್ರೋ ಸಂಸ್ಥೆಗೆ ಮರುಸೇರ್ಪಡೆಗೊಂಡಿದ್ದರು. 2002ನೇ ಸಾಲಿನ ಚಾರ್ಟೆಡ್ ಅಕೌಂಟೆಂಟ್ (ಸಿಎ) ಬ್ಯಾಚ್ ಐಯ್ಯರ್, ಚಿನ್ನದ ಪದಕ ವಿಜೇತೆ ಕೂಡ ಹೌದು. 2003ರಲ್ಲಿ ವಿಪ್ರೋ ಸಂಸ್ಥೆಯಲ್ಲಿ ಹಿರಿಯ ಇಂಟರ್ ನಲ್ ಅಡಿಟರ್ ಆಗಿ ಕಾರ್ಯಾರಂಭ ಮಾಡಿದ್ದರು. ಅಪರ್ಣಾ ಅವರಲ್ಲಿನ ನಾಯಕತ್ವ ಗುಣ ಈ 20 ವರ್ಷಗಳಲ್ಲಿ ವಿಪ್ರೋ ಸಂಸ್ಥೆಯಲ್ಲಿ ಅವರು ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು