News Karnataka Kannada
Wednesday, May 01 2024
ದೆಹಲಿ

ಚೆಸ್ ಆಟಗಾರ ಪ್ರಗ್ನಾನಂದ ತಾಯಿಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ ಅಮೂಲ್

Amul pays tribute
Photo Credit : News Kannada

ನವದೆಹಲಿ: ಯುವ ಚೆಸ್ ಸೆನ್ಸೇಷನ್ ಆರ್ ಪ್ರಗ್ನಾನಂದ ಅವರ ತಾಯಿ ಆರ್ ನಾಗಲಕ್ಷ್ಮಿ ಅವರಿಗೆ ಡೈರಿ ಬ್ರಾಂಡ್ ಅಮುಲ್ ಹೃದಯಸ್ಪರ್ಶಿ ಗೌರವ ಸಲ್ಲಿಸಿದೆ. ಇದನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದೆ.

ಪೋಸ್ಟ್‌ನಲ್ಲಿ ಅಮುಲ್‌ ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರಿಸಿದ ಪ್ರಗ್ನಾನಂದ ಮತ್ತು ಅವರ ತಾಯಿಯ ಚಿತ್ರಣವಿದೆ.

ಚಿತ್ರದಲ್ಲಿ, ಟೇಬಲ್ ನಲ್ಲಿ ಚೆಸ್ ಆಡುತ್ತಿರುವ ಪ್ರಗ್ನಾನಂದ ಅವರಿಗೆ, ತಾಯಿ ನಾಗಲಕ್ಷ್ಮಿ ಅವರು ಬ್ರೆಡ್ ತಿನ್ನಿಸುವ ಫೋಟೊ ವನ್ನು ಹಂಚಿಕೊಂಡಿದೆ. ಇದು ಚೆಸ್ ಜಗತ್ತಿನಲ್ಲಿ ತನ್ನ ಮಗನ ಯಶಸ್ಸಿಗೆ ತನ್ನ ಶಾಂತ ಮತ್ತು ಮಹತ್ವದ ಕೊಡುಗೆಯನ್ನು ಸಂಕೇತಿಸುತ್ತದೆ. ಅಮುಲ್ ಡೂಡಲ್ ಪ್ರಗ್ನಾನಂದ ಅವರ ಯಶಸ್ವಿ ಚೆಸ್ ವೃತ್ತಿಜೀವನವನ್ನು ರೂಪಿಸುವಲ್ಲಿ ಆರ್ ನಾಗಲಕ್ಷ್ಮಿ ಅವರು ನಿರ್ವಹಿಸಿದ ಪ್ರಮುಖ ಪಾತ್ರಕ್ಕೆ ಸಿಕ್ಕ ಗೌರವವಾಗಿದೆ.

ಇತ್ತೀಚೆಗೆ ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ವಿರೋಚಿತ ಸೋಲು ಅನುಭವಿಸಿದ್ದು, ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ಅವರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು