News Karnataka Kannada
Saturday, May 04 2024
ದೆಹಲಿ

ಏರ್ ಇಂಡಿಯಾ ಪ್ರಯಾಣಿಕರಿಗೆ ನೀಡಿದ ಊಟದಲ್ಲಿ ಕೀಟ ಪತ್ತೆ

Air India business class passenger shares video of insect in flight meal
Photo Credit : IANS

ನವದೆಹಲಿ: ಮುಂಬೈನಿಂದ ಚೆನ್ನೈಗೆ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಪ್ರಯಾಣಿಕರೊಬ್ಬರು ಸೋಮವಾರ ತಮಗೆ ವಿಮಾನದಲ್ಲಿ ನೀಡಿದ ಊಟದಲ್ಲಿ ಕೀಟವಿರುವ
ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಏರ್‌ ಇಂಡಿಯಾ ಬ್ಯುಸಿನೆಸ್‌ಕ್ಲಾಸ್‌ನಲ್ಲಿ ನೀಡಲಾದ ಊಟದಲ್ಲಿ ಕೀಟವಿತ್ತು. ನಾನು ವಿಮಾನ AI671 ನಲ್ಲಿ ಮುಂಬೈನಿಂದ ಚೆನ್ನೈಗೆ ಪ್ರಯಾಣಿಸಿದ್ದು, ಸೀಟ್ ಸಂಖ್ಯೆ 2C ಆಗಿತ್ತು” ಎಂದು ಪ್ರಯಾಣಿಕ ಮಹಾವೀರ್ ಜೈನ್ ಟ್ವೀಟ್ ಮಾಡಿದ್ದಾರೆ.

ವೀಡಿಯೊಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, “ಆತ್ಮೀಯ ಜೈನ್, ನಿಮ್ಮ ಪ್ರಯಾಣದ ವೇಳೆ ಉಂಟಾದ ಕಹಿ ಅನುಭವಕ್ಕೆ ವಿಷಾದಿಸುತ್ತೇವೆ. ಆಹಾರ ತಯಾರಿಕೆ ಪ್ರತಿ ಹಂತದಲ್ಲೂ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟು ಶುಚಿತ್ವ ಕ್ರಮ ಅನುಸರಿಸುತ್ತೇವೆ. ನಿಮ್ಮ ಪ್ರಯಾಣದ ದಿನಾಂಕ ಮತ್ತು ವಿಮಾನದ ವಿವರ, ಸೀಟ್ ಸಂಖ್ಯೆ ತಿಳಿಸಿದಲ್ಲಿ ಕ್ರಮಕ್ಕಾಗಿ ನಮ್ಮ ಅಡುಗೆ ತಂಡಕ್ಕೆ ತಿಳಿಸುತ್ತೇವೆ ಎಂದು ಏರ್‌ಲೈನ್ಸ್‌ ಹೇಳಿದೆ.

ಇದಕ್ಕೂ ಮುನ್ನ ಒಂದೇ ದಿನದಲ್ಲಿ ಏರ್ ಇಂಡಿಯಾಕ್ಕೆ ಸಂಬಂಧಿಸಿದಂತೆ ಎರಡು ದೂರುಗಳು ಬಂದಿದ್ದವು. ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ಸ್‌ನ ಬಿಸಿನೆಸ್ ಕ್ಲಾಸ್ ಲಾಂಜ್‌ನಲ್ಲಿ ಕಳಪೆ ಸೌಲಭ್ಯಗಳಿವೆ ಎಂದು ಭಾರತೀಯ ರಾಜತಾಂತ್ರಿಕರೊಬ್ಬರು ಆರೋಪಿಸಿದ್ದರು.ʼ

ಗಯಾನಾ, ಆಂಟಿಗುವಾ ಮತ್ತು ಬಾರ್ಬುಡಾ, ಸೇಂಟ್ ಕಿಟ್ಸ್ ಮತ್ತು ನೆವಿಸ್‌ನಲ್ಲಿ ಭಾರತದ ಹೈ ಕಮಿಷನರ್ ಶ್ರೀನಿವಾಸ್‌, ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ಲಾಂಜ್‌ನಲ್ಲಿ “ಖಾಲಿ” ಆಹಾರ ಕಂಟೇನರ್‌ಗಳು, ಬಿಸಾಡಬಹುದಾದ ಪ್ಲೇಟ್‌ಗಳು ಮತ್ತು ಕಟ್ಲರಿಗಳು ಮತ್ತು “ಪ್ರತಿಕ್ರಿಯಿಸದ” ಸಿಬ್ಬಂದಿ ಇದ್ದಾರೆ ಎಂದು  ಆರೋಪಿಸಿದ್ದರು.

ಅದೇ ದಿನ, ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಸೋಮವಾರ ನಾಗ್ಪುರದಿಂದ ಮುಂಬೈಗೆ ತೆರಳುವ ವೇಳೆ ತಮಗೆ ನೀಡಿದ ಊಟದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು