News Karnataka Kannada
Saturday, May 04 2024
ದೆಹಲಿ

ಬ್ರಿಕ್ಸ್‌ ಗೆ ಹೊಸದಾಗಿ ಸೇರ್ಪಡೆಗೊಂಡ 6 ರಾಷ್ಟ್ರಗಳು

6 newly inducted BRICS countries
Photo Credit : IANS

ನವದೆಹಲಿ: ಆರು ರಾಷ್ಟ್ರಗಳಾದ ಈಜಿಪ್ಟ್, ಇಥಿಯೋಪಿಯಾ, ಇರಾನ್, ಅರ್ಜೆಂಟೀನಾ, ಯುಎಇ ಮತ್ತು ಸೌದಿ ಅರೇಬಿಯಾಗಳನ್ನು ಪೂರ್ಣ ಸಮಯದ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುವುದು ಎಂದು ಬ್ರಿಕ್ಸ್ ಗುರುವಾರ ಪ್ರಕಟಿಸಿದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸಾ ಈ ವಿಚಾರವನ್ನು ಘೋಷಿಸಿದ್ದಾರೆ. ಸದಸ್ಯತ್ವವು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಈ ಆರು ರಾಷ್ಟ್ರಗಳು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಬ್ರಿಕ್ಸ್‌ ಗುಂಪಿಗೆ ಸೇರ್ಪಡೆಗೊಳ್ಳಲಿದೆ.

ರಮಾಫೋಸಾ ಅವರ ಘೋಷಣೆ ನಂತರ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ಸೇರ್ಪಡೆಗೊಳ್ಳುವ ಎಲ್ಲ ಎಲ್ಲಾ ಆರು ರಾಷ್ಟ್ರಗಳ ಸದಸ್ಯರನ್ನು ಸ್ವಾಗತಿಸಿದರು.

ಬ್ರಿಕ್ಸ್ ವಿಸ್ತರಣೆಯನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹೊಸ ಸದಸ್ಯರು ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದರು.

ಈ 3 ದಿನಗಳ ಸಭೆಯಲ್ಲಿ, ಬಹಳಷ್ಟು ಸಕಾರಾತ್ಮಕ ಫಲಿತಾಂಶಗಳು ಹೊರಬಂದಿವೆ ಎಂದು ನನಗೆ ಖುಷಿಯಾಗಿದೆ. ಬ್ರಿಕ್ಸ್‌ನ ಸದಸ್ಯರ ವಿಸ್ತರಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ ಎಂದರು.

ಮುಂದಿನ ವರ್ಷ ಸೇರ್ಪಡೆಗೊಳ್ಳುವ ಎಲ್ಲಾ ಆರು ದೇಶಗಳು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಗೆ ಸೇರಲು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಆದರೆ ಭಾರತ ಇದಕ್ಕೆ ಸಹಿ ಹಾಕಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು