News Karnataka Kannada
Wednesday, May 01 2024
ದೆಹಲಿ

30 ಲಕ್ಕಕ್ಕೂ ಹೆಚ್ಚು ಮಂದಿಯ WHATSAPP ಖಾತೆ ಬ್ಯಾನ್

Whatsapp
Photo Credit :

ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್‌ ಭಾರತದಲ್ಲಿರುವ ತನ್ನ ಬಳಕೆದಾರರ ಪೈಕಿ 30 ಲಕ್ಕಕ್ಕೂ ಹೆಚ್ಚು ಮಂದಿಯ ಖಾತೆಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದೆ. ಜೂನ್ 16 ರಿಂದ ಜುಲೈ 31ರ ನಡುವಿನ 45 ದಿನಗಳ ಅವಧಿಯಲ್ಲಿ ಇಷ್ಟು ಮಂದಿಯ ಖಾತೆಗಳು ಬ್ಯಾನ್ ಆಗಿವೆ.

ಇದೇ ವೇಳೆ ಖಾತೆ ಸಪೋರ್ಟ್‌ಗೆ 137 ಮನವಿಗಳು ಬಂದಿದ್ದು, ಖಾತೆಗಳನ್ನು ಬ್ಯಾನ್ ಮಾಡಲು 316 ಮನವಿಗಳನ್ನು ವಾಟ್ಸಾಪ್ ಸ್ವಿಕರಿಸಿದೆ. ಭಾರತದ ಕಾನೂನುಗಳು ಹಾಗೂ ವಾಟ್ಸಾಪ್‌ ನ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ನಾವು ಸ್ವೀಕರಿಸಿದ ಬಳಕೆದಾರರ ವರದಿಗಳು ಹಾಗೂ ದೂರುಗಳನ್ನು ಆಧರಿಸಿ, ನಮ್ಮ ಪತ್ತೆ ಮತ್ತು ಕಡಿವಾಣದ ಕ್ರಮಗಳ ಮೂಲಕ ಇಷ್ಟು ಖಾತೆಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಎಂದು ಕಂಪನಿ ತನ್ನ ಅಧಿಕೃತ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಬ್ಯಾನ್ ಆದ 95 ಪ್ರತಿಶತ ಖಾತೆಗಳಿಂದ ಸ್ಪಾಮ್ ಸಂದೇಶಗಳು ರವಾನೆಯಾಗುತ್ತಿದ್ದವೆಂದು ಕಂಪನಿ ತಿಳಿಸಿದೆ. ಮೇ 15-ಜೂನ್ 15ರ ನಡುವಿನ ಅವಧಿಯಲ್ಲಿ ಇಂಥದ್ದೇ ಕಾರಣಗಳಿಂದ 20 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದು ಮಾಡಿದ್ದಾಗಿ ವಾಟ್ಸಾಪ್ ತನ್ನ ವರದಿಯಲ್ಲಿ ತಿಳಿಸಿತ್ತು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು