ನವದೆಹಲಿ, ನ.26 : ಭಾರತೀಯ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ ಕೌನ್ಸಿಲ್ (ಸಿಐಎಸ್ಸಿಇ) 2021-22ನೇ ಸಾಲಿನ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಕೆ ಮಾಡಲು ಅನುಮತಿ ನೀಡಿದೆ.
ಸಿಐಎಸ್ಸಿಇ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ಪರೀಕ್ಷಾರ್ಥಿಗಳು ಕ್ಯಾಸಿಯೋ ಎಫ್ಎಕ್ಸ್-82 ಎಂಎಸ್ ಅಥವಾ ಇದಕ್ಕೆ ಸಮನಾದ ಕಾರ್ಯವಿಧಾನ ಹೊಂದಿರುವ (ವೈಜ್ಞಾನಿಕ ಕ್ಯಾಲ್ಕುಲೇಟರ್) ಬಳಕೆ ಮಾಡಲು ಅನುಮತಿ ನೀಡಿರುವುದಾಗಿ ತಿಳಿಸಿದೆ.
ನವೆಂಬರ್ 22ರಿಂದ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗಲಿದ್ದು ಡಿಸೆಂಬರ್ 20ರವರೆಗೆ ನಡೆಲಿವೆ. ವಿದ್ಯಾರ್ಥಿಗಳಿಗೆ ಪ್ರಶ್ನಪತ್ರಿಕೆ ಓದಿಕೊಳ್ಳಲು ಆರಂಭದಲ್ಲಿ 10 ನಿಮಿಷ ನೀಡಲಾಗುತ್ತದೆ. ನಂತರ ಎಂಸಿಕ್ಯೂ ಮಾದರಿಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ 1.50ಕ್ಕೆ ಲಭ್ಯವಾಗಲಿವೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ನವೆಂಬರ್ನಲ್ಲಿ ನಡೆಯುವ ಮೊದಲ ಸೆಮಿಸ್ಟರ್ಗೆ ಕಡ್ಡಾಯವಾಗಿ ಹಾಜರಾಬೇಕು ಮತ್ತು ಮುಂದಿನ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಡೆಯುವ ಎರಡನೇ ಸೆಮಿಸ್ಟರ್ಗೂ ಹಾಜರಾದರೆ ಮಾತ್ರ ಉತ್ತೀರ್ಣತೆ ಅರ್ಹತೆ ಪಡೆಯುತ್ತಾರೆ ಎಂದು ತಿಳಿಸಲಾಗಿದೆ.