ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸಂಸತ್ ಭವನ ನಿರ್ಮಾಣವಾಗುತ್ತಿದ್ದು, ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಕ್ಷತಾ ಹೆಲ್ಮೆಟ್ ಧರಿಸಿ ಪ್ರಗತಿಯಲ್ಲಿರುವ ಕೆಲಸವನ್ನು ಪ್ರಧಾನಿ ಮೋದಿ ಅವರು ಪರಿಶೀಲಿಸಿದ್ದಾರೆ.
ಅಂದಾಜು 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ನಿರ್ಮಾಣ ಸ್ಥಿತಿ ಬಗ್ಗೆ ಪ್ರತ್ಯಕ್ಷ ಪರಿಶೀಲನೆ ನಡೆಸುತ್ತಿದ್ದಾರೆ. 2022 ರವೇಳೆಗೆ ಕಾರ್ಯ ಪೂರ್ಣಗೊಳ್ಳಲಿದೆ.
ಮೂರು ದಿನಗಳ ಯುಎಸ್ ಪ್ರವಾಸ ಮುಗಿಸಿ ಬಂದ ಪ್ರಧಾನಿ ಮೋದಿ ವಾಪಾಸಾದ ದಿನ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆ.ಪಿ ನಡ್ಡಾರನ್ನು ಭೇಟಿ ಮಾಡಿದ್ದಾರೆ. ತದನಂತರ ರಾತ್ರಿ 8:45 ವೇಳೆಗೆ ನೂತನ ಸಂಸತ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹೊಸ ಸಂಸತ್ ಕಟ್ಟಡವು 64,500ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ. ಭವ್ಯವಾದ ಸಂವಿಧಾನ ಸಭಾಂಗಣವನ್ನು ಹೊಂದಿರಲಿದೆ. ಸಂಸತ್ತಿನ ಒಬ್ಬ ಸದಸ್ಯರಿಗೆ ಒಂದು ಕೋಣೆ, ಒಂದು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಕ್ಯಾಂಟೀನ್ ಮತ್ತು ಪಾರ್ಕಿಂಗ್ ಸ್ಥಳವನ್ನು ಹೊಂದಿರಲಿದೆ.
ಹೊಸ ಕಟ್ಟಡದಲ್ಲಿರುವ ಲೋಕಸಭಾ ಚೇಂಬರ್ 888 ಸದಸ್ಯರಿಗೆ ಆಸನ ಸಾಮರ್ಥ್ಯವನ್ನು ಹೊಂದಿದ್ದು, ರಾಜ್ಯಸಭೆಯು ಸದಸ್ಯರಿಗೆ 384 ಸ್ಥಾನಗಳನ್ನು ಹೊಂದಿರುತ್ತದೆ