ನವದೆಹಲಿ:ವಿದೇಶಗಳಿಗೆ ಖಾಸಗಿ ಭೇಟಿ ಕೈಗೊಳ್ಳಲು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೂಡ ಅನುಮತಿ ಪಡೆಯಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
‘ವಿದೇಶಗಳಲ್ಲಿನ ರಾಯಭಾರಿ ಕಚೇರಿಗಳಿಗೆ, ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಹಾಗೂ ವೀಸಾ ವಿಭಾಗಗಳಿಗೆ ನ್ಯಾಯಮೂರ್ತಿಗಳ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಹಾಗಾಗಿ, ಆದೇಶದ ಅಗತ್ಯವೇ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಹಾಗೂ ಜಸ್ಮೀತ್ ಸಿಂಗ್ ಅವರಿದ್ದ ನ್ಯಾಯಪೀಠ ಹೇಳಿತು.