News Karnataka Kannada
Saturday, May 04 2024
ದೆಹಲಿ

ಸತತ ನಾಲ್ಕನೇ ದಿನ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆ

Petrol Main Newsk 5721678124
Photo Credit :

ನವದೆಹಲಿ : ಶನಿವಾರದಂದು ಸತತ ನಾಲ್ಕನೇ ದಿನ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆಯಾಗಿವೆ. ದೇಶಾದ್ಯಂತ ಆಯಾ ರಾಜ್ಯಗಳ ತೆರಿಗೆಗಳಿಗೆ ತಕ್ಕಂತೆ ಪೆಟ್ರೋಲ್ ಮತ್ತು ಡೀಸಲ್​ ಮತ್ತಷ್ಟು ದುಬಾರಿಯಾಗಿವೆ.

ನಿನ್ನೆಯ ಏರಿಕೆಯ ನಂತರ ತಮಿಳುನಾಡಿನ ರಾಜಧಾನಿ ಚೆನ್ನೈ, ಡೀಸಲ್​ ಬೆಲೆ ಪ್ರತಿ ಲೀಟರ್​ಗೆ 100 ರೂಪಾಯಿಯ ಮಟ್ಟ ದಾಟಿದ ದೇಶದ ಎರಡನೇ ಮೆಟ್ರೋ ನಗರವಾಗಿದೆ. ಇಂದು ಚೆನ್ನೈನಲ್ಲಿ ಡೀಸಲ್​ ಬೆಲೆ ಲೀಟರ್​ಗೆ 100.24 ರೂ.ಗಳಾಗಿದ್ದರೆ, ಪೆಟ್ರೋಲ್ ಬೆಲೆ 104.22 ರೂಪಾಯಿಯಾಗಿದೆ.

ಇಂದು ದೆಹಲಿಯ ಪೆಟ್ರೋಲ್​ ಬೆಲೆ 107.24 ರೂಪಾಯಿ ಮತ್ತು ಡೀಸಲ್ ಬೆಲೆ 95.97 ರೂಪಾಯಿಯಷ್ಟಿದೆ. ಕೋಲ್ಕತಾದಲ್ಲಿ ಪೆಟ್ರೋಲ್​ 107.78 ರೂ., ಡೀಸಲ್​ 99.08 ರೂ. ದರ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ 113.12 ಆಗಿದ್ದು, ಡೀಸಲ್ ಲೀಟರ್​ಗೆ 104 ರೂಪಾಯಿಗಳಷ್ಟಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ನಿನ್ನೆಯ ದಿನ ಲೀಟರ್​ಗೆ 110.61 ಇದ್ದದ್ದು, 37 ಪೈಸೆ ಏರಿಕೆಯೊಂದಿಗೆ ಇಂದು 110.98 ರೂಪಾಯಿ ಆಗಿದೆ. ಡೀಸಲ್​ ದರ 100 ರೂಪಾಯಿ ಮಟ್ಟ ದಾಟಿದ ಕೆಲವೇ ಮಹಾನಗರಗಳಲ್ಲಿ ಬೆಂಗಳೂರು ಕೂಡ ಒಂದು. ನಗರದ ಇಂದಿನ ಡೀಸಲ್ ಬೆಲೆ ಲೀಟರ್​ಗೆ 101.86 ರೂ. ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು