ಹೊಸದಿಲ್ಲಿ: ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಇದುವರೆಗೆ ವಿದೇಶದಿಂದ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನ ಮನೆಯಲ್ಲೇ ಕ್ವಾರಂಟೈನ್ನಲ್ಲಿರಬೇಕಿತ್ತು.ಇದರ ಬದಲು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಪೈಕಿ ಶೇ.2ರಷ್ಟು ಮಂದಿಯನ್ನು ಒಟ್ಟಾರೆಯಾಗಿ ಆಯ್ಕೆ ಮಾಡಿ ಪರೀಕ್ಷೆ ಮಾಡಲಾಗುತ್ತದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಈ ನಿರ್ಬಂಧವನ್ನು ಸಡಿಲಿಸಿದ್ದಾರೆ. 8ನೇ ದಿನಕ್ಕೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳ ಬೇಕಿತ್ತು.
ಉಳಿದ ವರನ್ನು ಬಿಟ್ಟು ಕಳಿಸಲಾಗುತ್ತದೆ. ಇದರ ಬದಲು ಪ್ರಯಾಣಿಕರು ಮನೆಗೆ ತೆರಳಿದ ಮೇಲೆ ತಮ್ಮ ಆರೋಗ್ಯವನ್ನು 14 ದಿನಗಳ ಕಾಲ ತಾವೇ ಪರೀಕ್ಷೆಗೊಳಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಇದು ಪ್ರಯಾಣಿಕರಿಗೆ ತೀವ್ರ ಸಮಾಧಾನ ತರಲಿದೆ.
ಆದರೆ ಪ್ರಯಾಣ ಆರಂಭಕ್ಕೂ 72 ಗಂಟೆಗಳೊಳಗೆ ಪಡೆದ ಆರ್ಟಿಪಿಸಿಆರ್ ಪರೀಕ್ಷಾ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ. ಜತೆೆಗೆ ಲಸಿಕೆ ಪ್ರಮಾಣಪತ್ರ ಸಲ್ಲಿಸಲು ಅವಕಾಶವಿದೆ. ಹೊಸ ಬದಲಾವಣೆ ಅಮೆರಿಕ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿ 82 ದೇಶಗಳಿಗೆ ಅನ್ವಯಿಸುತ್ತದೆ.