ನವದೆಹಲಿ: ರಾಷ್ಟ್ರ ರಾಜಧಾನಿ ಏಪ್ರಿಲ್ 9 ರಂದು ಗರಿಷ್ಠ ತಾಪಮಾನ 42.4 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ.ಇದು ದೆಹಲಿಯಲ್ಲಿ 1950 ರ ಬಳಿಕ ಏಪ್ರಿಲ್ನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ.
ಶನಿವಾರದ ಗರಿಷ್ಠ ತಾಪಮಾನವು ವರ್ಷದ ಈ ಸಮಯದಲ್ಲಿ ಸಾಮಾನ್ಯಕ್ಕಿಂತ ಎಂಟು ಡಿಗ್ರಿಗಳಷ್ಟು ಹೆಚ್ಚಾಗಿದೆ. , ಹವಾಮಾನ ಇಲಾಖೆಯು ಭಾನುವಾರದಂದು ರಾಷ್ಟ್ರ ರಾಜಧಾನಿಗೆ ಆರೆಂಜ್ ಅಲರ್ಟ್ ನೀಡಿದೆ ಮತ್ತು ತೀವ್ರತರವಾದ ಶಾಖದ ಪರಿಸ್ಥಿತಿಗಳು ಈ ಪ್ರದೇಶದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಎಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ಮೊದಲಾರ್ಧದಲ್ಲಿ ದೆಹಲಿಯಲ್ಲಿ ಇಷ್ಟು ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಹೇಳಿದೆ.
ಬಿಸಿಗಾಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಐಎಮ್ಡಿ ಅಧಿಕಾರಿಗಳು ಸುದೀರ್ಘ ಶುಷ್ಕ ವಾಯುವ್ಯ ಭಾರತದಲ್ಲಿ ತೀವ್ರ ಬಿಸಿ ವಾತಾವರಣಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.