Categories: ದೆಹಲಿ

ಮೇ 1 ರಂದು ನೀತಿ ಆಯೋಗದ ನೂತನ ಉಪಾಧ್ಯಕ್ಷರ ಪದಗ್ರಹಣ

ನವದೆಹಲಿ:ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ಅವರು ದಿಢೀರ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸುಮನ್ ಕೆ ಬೆರಿ ಅವರನ್ನು ನೂತನ ಉಪಾಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಸುಮನ್ ಅವರು 2022ರ ಮೇ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿದೆ.

ರಾಜೀವ್ ಕುಮಾರ್ ಅವರ ಅಧಿಕಾರಾವಧಿ ಏಪ್ರಿಲ್ 30ರಂದು ಮುಕ್ತಾಯಗೊಳ್ಳಲಿದೆ. ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ವಿಸಿ ಅರವಿಂದ್ ಪನಾಗಾರಿಯಾ ಅವರು ನಿರ್ಗಮಿಸಿದ್ದ ನಂತರ ಪ್ರಮುಖ ಅರ್ಥಶಾಸ್ತ್ರ ತಜ್ಞರಾದ ರಾಜೀವ್ ಕುಮಾರ್ ಅವರು 2017ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಕೇಂದ್ರದ ಆದೇಶದ ಪ್ರಕಾರ, ರಾಜೀವ್ ಕುಮಾರ್ ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿದ್ದು, ಅವರನ್ನು ಏಪ್ರಿಲ್ 30ರಂದು ಅನ್ವಯವಾಗುವಂತೆ ಹುದ್ದೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ವಿವರಿಸಿದೆ.

ರಾಜೀವ್ ಕುಮಾರ್ ಅವರು ಆಕ್ಸ್ ಫರ್ಡ್ ಯೂನಿರ್ವಸಿಟಿಯಿಂದ ಎಕಾನಾಮಿಕ್ಸ್ ನಲ್ಲಿ ಡಿಫಿಲ್ ಹಾಗೂ ಲಕ್ನೋ ವಿವಿಯಿಂದ ಪಿಎಚ್ ಡಿ ಪದವಿ ಪಡೆದಿದ್ದರು. ಬೆರಿ ಅವರು ನವದೆಹಲಿಯಲ್ಲಿ ಎಕೋನಾಮಿಕ್ ರಿಸರ್ಚ್ ನ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.

Ashika S

Recent Posts

ಅವರೆಕಾಳು ಕಚೋರಿ ಮನೆಯಲ್ಲೇ ಮಾಡುವುದು ಹೇಗೆ?

ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ತಯಾರಿಯ ಬಗೆಗಿನ ಮಾಹಿತಿ.

18 mins ago

ಬೃಹತ್ ನಕಲಿ ಸಿಮ್ ಜಾಲ ದಂಧೆ ಬೆಳಕಿಗೆ: ಆನ್ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸಪ್ಲೈ

ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ…

27 mins ago

ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ; ಭೀಕರ ದೃಶ್ಯ ಸೆರೆ

ಮಹಿಳೆ ಮೇಲೆ ಹಿಂಬದಿಯಿಂದ ಬೆಲ್ಟ್ ಮೂಲಕ ದಾಳಿ ನಡೆಸಿ, ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ಭೀಕರ ಘಟನೆ ನ್ಯೂಯಾರ್ಕ್ ನಗರದಲ್ಲಿ…

30 mins ago

ಮಲತಂದೆಯಿಂದಲೇ ಬಾಲಿವುಡ್ ನಟಿ ಕೊಲೆ; ಕೋರ್ಟ್

ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಮುಂಬೈ ಸೆಷನ್ ಕೋರ್ಟ್ ಘಟನೆ…

41 mins ago

ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಮೈಕ್ರೊಚಿಪ್‌ ಅಳವಡಿಕೆ ಕಡ್ಡಾಯ

ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ…

44 mins ago

ಶಾರ್ಟ್ ಸರ್ಕ್ಯೂಟ್​ನಿಂದ ಸಿನಿಮಾ ಶೂಟಿಂಗ್ ಸೆಟ್​ ನಲ್ಲಿ ಬೆಂಕಿ: ನಾಲ್ಕು ಕೋಟಿ ನಷ್ಟ

ಲುಗು  ಜನಪ್ರಿಯ ನಟ ನಂದಮೂರಿ ಕಲ್ಯಾಣ್ ರಾಮ್  ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಸೆಟ್​ಗೆ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ…

45 mins ago