Categories: ದೆಹಲಿ

ಮುಂದಿನ 2 ವರ್ಷಗಳಲ್ಲಿ ದೇಶದಲ್ಲಿ 6ಜಿ ಸೇವೆ ಆರಂಭವಾಗುತ್ತದೆ; ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಮುಂದಿನ 2 ವರ್ಷಗಳಲ್ಲಿ ಅಂದರೆ 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ದೇಶದಲ್ಲಿ 6ಜಿ ಸೇವೆ ಆರಂಭವಾಗುತ್ತದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದೇಶದಲ್ಲಿ ಇನ್ನೂ 5G ಸೇವೆಯೇ ಇನ್ನೂ ಆರಂಭಗೊಂಡಿಲ್ಲ.

ಅದಾಗಲೇ ಕೇಂದ್ರ ಸರ್ಕಾರ 6ಜಿ ಸೇವೆಯನ್ನು ಆರಂಭಿಸಲು ಚಿಂತನೆಯಲ್ಲಿ ತೊಡಗಿದೆ. ಇದಕ್ಕೆ ಇಂಬು ನೀಡುವಂತೆ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದು, 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ದೇಶದಲ್ಲಿ 6ಜಿ ಸೇವೆ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ‘2023ರ ಅಂತ್ಯದ ವೇಳೆಗೆ ಇಲ್ಲವೇ 2024ರ ಆರಂಭದಲ್ಲಿ ಅಂದರೆ 2 ವರ್ಷದೊಳಗೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ಯಶಸ್ವಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳಿಗೆ ಮತ್ತು ಎಂಜಿನಿಯರ್ ಗಳಿಗೆ ಅಗತ್ಯ ಅನುಮತಿ ನೀಡಲಾಗಿದೆ.

ದೇಶದಲ್ಲಿ 6G ಸೇವೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ದಾಪುಗಾಲು ಇಡುತ್ತಿದ್ದೇವೆ. ಭಾರತದಲ್ಲಿ ನಾವು ಟೆಲಿಕಾಂ ಸಾಫ್ಟವೇರ್ ಅನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಈ ನೂತನ ಸಾಫ್ಟವೇರ್, ಭಾರತದಲ್ಲಿ ತಯಾರಿಸಿದ ಟೆಲಿಕಾಂ ಸಾಧನಗಳು ಹಾಗೂ ಟೆಲಿಕಾಂ ನೆಟ್ ವರ್ಕ್ ಗಳಿಗೆ ಸೇವೆ ಒದಗಿಸಲಿದೆ. ಅಲ್ಲದೆ ಮುಂದಿನ ವರ್ಷದ 3ನೇ ತ್ರೈಮಾಸಿಕ ವೇಳೆಗೆ ತಂತ್ರಜ್ಞಾನದ ಪ್ರಮುಖ ಸಾಫ್ಟವೇರ್ ಅನ್ನು ಸಿದ್ಧಪಡಿಸಲಿದ್ದೇವೆ ಎಂದು ಹೇಳಿದರು.

ಅಂತೆಯೇ 5G ಕುರಿತು ಮಾತನಾಡಿದ ಕೇಂದ್ರ ಸಚಿವರು, 2022ರ 2ನೇ ತ್ರೈಮಾಸಿಕದಲ್ಲಿ ಐದನೇ ತಲೆಮಾರಿನ ತರಂಗಾಂತರಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಮೂಲಗಳ ಪ್ರಕಾರ, ‘ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾಗಳಿಗೆ ದೇಶದಲ್ಲಿ 5G ಪ್ರಯೋಗಗಳಿಗಾಗಿ ಸ್ಪೆಕ್ಟ್ರಮ್ ನೀಡಲಾಗಿದೆ. ಈ ಸಮಯದಲ್ಲಿ ಜಿಯೋ ಮತ್ತು ಏರ್ ಟೆಲ್ ಸುಮಾರು 1ಜಿಬಿ/ಸೆಕೆಂಡ್ ಗರಿಷ್ಠ 5G ವೇಗವನ್ನು ದಾಖಲಿಸಿದೆ. ಮತ್ತೊಂದೆಡೆ, 5G ಪ್ರಯೋಗದ ಸಮಯದಲ್ಲಿ ವೋಡಾಫೋನ್-ಐಡಿಯಾ ಗರಿಷ್ಠ 3.5ಜಿಬಿ/ಸೆಕೆಂಡ್ ವೇಗವನ್ನು ಸಾಧಿಸಿದೆ.

Gayathri SG

Recent Posts

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 mins ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

24 mins ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

52 mins ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

1 hour ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

1 hour ago

ರೀಲ್ಸ್ ಸ್ಟಾರ್ ಗೀತಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗೊರವಿಕಲ್ಲು ಬಡಾವಣೆಯ ಶಿಕ್ಷಕಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್ ಎನಿಸಿದ್ದ ಗೀತಾಶ್ರೀ ಶವ ಅವರ ಮನೆಯಲ್ಲೇ…

2 hours ago