ನವದೆಹಲಿ : ಲಡಾಖ್, ಕಾರ್ಗಿಲ್ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಹಲವಡೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.
ಇಂದು ಮುಂಜಾನೆ 2.53ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಭೂಕಂಪನಕ್ಕೆ ಒಳಗಾದ ಪ್ರದೇಶ ಕಾರ್ಗಿಲ್ನಿಂದ 169 ಕಿಲೋಮೀಟರ್ ಉತ್ತರಕ್ಕಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.
ಜೊತೆಗೆ ಮಿಜೋರಾಂನಲ್ಲಿ 5.6ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಡಾಖ್ ನ ಕಾರ್ಗಿಲ್ ನಿಂದ ಉತ್ತರಕ್ಕೆ 169 ಕಿ.ಮೀ ದೂರದಲ್ಲಿ ಇಂದು ಬೆಳಿಗ್ಗೆ 02:53 ಕ್ಕೆ 4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಾಜಿ ತಿಳಿಸಿದೆ.