News Karnataka Kannada
Monday, April 29 2024
ದೆಹಲಿ

ಬಾಲ ಪುರಸ್ಕಾರ ವಿಜೇತ ಮಕ್ಕಳೊಂದಿಗೆ ವರ್ಚುವಲ್ ಸಂವಾದ ನಡೆಸಿದ ಮೋದಿ

Modi
Photo Credit : IANS

ನವದೆಹಲಿ : ಸರ್ಕಾರದ ಎಲ್ಲ ನೀತಿಗಳು ಯುವಜನ ಕೇಂದ್ರಿತವಾಗಿವೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರು ‘ವೋಕಲ್ ಫಾರ್ ಲೋಕಲ್’ ನೀತಿಗೆ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ಮಕ್ಕಳು ಮನೆಗಳಲ್ಲಿರುವ ವಿದೇಶಿ ಮೂಲದ ವಸ್ತುಗಳನ್ನು ಪಟ್ಟಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಮಕ್ಕಳೊಂದಿಗೆ ಸೋಮವಾರ ವರ್ಚುವಲ್ ಸಂವಾದ ನಡೆಸಿದ ಮೋದಿ, ಪುರಸ್ಕೃತರಿಗೆ ಡಿಜಿಟಲ್ ಸರ್ಟಿಫಿಕೆಟ್​ಗಳನ್ನು ಪ್ರದಾನ ಮಾಡಿದರು. ಇದಕ್ಕಾಗಿ ಬ್ಲಾಕ್​ಚೈನ್ ತಂತ್ರಜ್ಞಾನವನ್ನು ಬಳಸಲಾಗಿತ್ತು. ಕರ್ತವ್ಯ ಮತ್ತು ದೇಶ ಮೊದಲು ಎಂಬುದು ನೇತಾಜಿಯಿಂದ ನಾವು ಕಲಿಯುವ ದೊಡ್ಡ ಸ್ಪೂರ್ತಿ ಪಾಠ. ದೇಶಕ್ಕಾಗಿನ ಕರ್ತವ್ಯದಲ್ಲಿ ನಿಮ್ಮ ಹಾದಿಯಲ್ಲಿ ಮುನ್ನಡೆಯಬೇಕು ಎಂದ ಅವರು, ಬಾಲ ಪುರಸ್ಕಾರ ವಿಜೇತ ಮಕ್ಕಳು ಇಡೀ ದೇಶಕ್ಕೇ ಸ್ಪೂರ್ತಿ. ಜನವರಿ 3ರಿಂದ ಇದುವರೆಗೆ 4 ಕೋಟಿಗೂ ಅಧಿಕ ಮಕ್ಕಳು ಕರೊನಾ ವ್ಯಾಕ್ಸಿನ್ ಪಡೆದಿದ್ದಾರೆ ಎಂದರು.

29 ಮಕ್ಕಳು: ಆವಿಷ್ಕಾರ, ರ್ತಾಕ ಸಾಧನೆ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಹಾಗೂ ಶೌರ್ಯ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ 15-18 ವಯೋಮಿತಿಯ ಮಕ್ಕಳಿಗೆ ಬಾಲ ಪುರಸ್ಕಾರ ನೀಡಲಾಗುತ್ತದೆ. ಈ ವರ್ಷ 29 ಮಕ್ಕಳು ಈ ಗೌರವಕ್ಕೆ ಭಾಜನರಾದರು.

ಒಡೆದ ಗಾಜಿನ ಮೇಲೆ ನೃತ್ಯ!: 13 ವರ್ಷಗಳಿಂದ ಭರತನಾಟ್ಯ ಪಟು ಆಗಿರುವ ರೆಮೋನಾ, ಒಡೆದ ಗಾಜಿನ ಮೇಲೆ ನೃತ್ಯ, ಮಡಕೆ ಮೇಲೆ ಸಮತೋಲನದ ನೃತ್ಯ, ಕೋಲನ ಮೇಲೆ ನೃತ್ಯ ಇತ್ಯಾದಿ ಆವಿಷ್ಕಾರಿ ನೃತ್ಯಗಳನ್ನೂ ಮಾಡಿದವರು. 16 ರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ 20 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ.ಶ್ರೀವಿದ್ಯಾ ಮುರಳೀಧರ್ ಅವರ ಶಿಷ್ಯೆ. ಒಡಿಸ್ಸಿ, ಮೋಹಿನಿಯಾಟ್ಟಂ ಅಲ್ಲದೆ ಯಕ್ಷಗಾನದಲ್ಲೂ ತರಬೇತಿ ಪಡೆಯುತ್ತಿದ್ದಾರೆ. ಗೌತಮ ಭಟ್ಟಾಚಾರ್ಯರಿಂದ ಪಾಶ್ಚಿಮಾತ್ಯ ನೃತ್ಯವನ್ನೂ ಅಭ್ಯಸಿಸುತ್ತಿದ್ದಾರೆ.

ರೆಮೋನಾಗೆ ಬಾಲ ಪುರಸ್ಕಾರ

ತಾಯಿ ಗ್ಲಾಡಿಸ್ ಜೊತೆ ರೆಮೋನಾ
ಮಂಗಳೂರಿನ ಪದುವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರೆಮೋನಾ ಇವೆಟ್ ಪಿರೇರಾಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 1 ಲಕ್ಷ ರೂ. ನಗದು ಒಳಗೊಂಡಿದೆ. ವಿಡಿಯೋ ಕಾನ್ಪರೆನ್ಸ್​ನಲ್ಲಿ ಪ್ರಧಾನಿ ಅವರೊಂದಿಗೆ ರೆಮೋನಾ ಮಾತುಕತೆ ನಡೆಸಿದರು. ಅವರ ತಾಯಿ ಗ್ಲಾಡಿಸ್ ಪಿರೇರಾ ಜತೆಗಿದ್ದರು. ‘ಮೂರನೇ ವರ್ಷದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ, ಹೇಗೆ ಅಭ್ಯಾಸ ಮಾಡಿದ್ದೀರಿ? ನೀವೇ ಸ್ವಯಂ ಆಗಿ ಅಭ್ಯಾಸ ಮಾಡುತ್ತಿದ್ದಿರಾ ಅಥವಾ ಹೆತ್ತವರು ಕಾಳಜಿ ವಹಿಸಿದ್ದರೇ’ ಎಂಬ ಪ್ರಧಾನಿ ಪ್ರಶ್ನಿಸಿದರು. ‘ನನ್ನ ತಾಯಿಯವರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಆಸಕ್ತಿ. ಹಾಗಾಗಿ ನಾನು ಇದರಲ್ಲಿ ಆಸಕ್ತಿ ಬೆಳೆಸಿಕೊಂಡೆ’ ಎಂದು ರೆಮೋನಾ ಉತ್ತರಿಸಿದರು. ‘ಚಿಕ್ಕಂದಿನಿಂದಲೇ ಏನಾದರೂ ಕಠಿಣ ಪರಿಸ್ಥಿತಿ ಎದುರಾಗಿತ್ತೇ’ ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರೆಮೋನಾ, ‘ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡೆ, ಹಾಗಾಗಿ ತಾಯಿ ಬಹಳ ಕಷ್ಟದಲ್ಲೇ ನನ್ನನ್ನು ಓದಿಸಿದರು, ನೃತ್ಯ ತರಬೇತಿಗೆ ಸೇರಿಸಿದರು’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು