ನವದೆಹಲಿ : ಹಬ್ಬಗಳ ಹೊತ್ತಲ್ಲೇ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಈರುಳ್ಳಿ, ಟೊಮ್ಯಾಟೊ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ.
ಭಾರೀ ಮಳೆಯಿಂದಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೇಸಿಗೆ ಬೆಳೆ ಹಾನಿಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಂತೆಯೇ ಈರುಳ್ಳಿ, ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಸಗಟು ಮಾರಾಟ ದರ ಕಿಲೋ ಮೇಲೆ 10 ರೂ.ನಿಂದ 15 ರೂ.ಗೆ ಏರಿಕೆಯಾಗಿದ್ದು. ದೆಹಲಿಯಲ್ಲಿ ಈರುಳ್ಳಿ ಬೆಲೆ 28 ರೂ.ನಿಂದ 40 ರೂ.ಗೆ ಏರಿಕೆಯಾಗಿದೆ.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕಿಲೋಗೆ 50 ರೂ. ನಿಂದ 60 ರೂ.ಗೆ ಆಗಿದೆ. ಟೊಮ್ಯಾಟೊ ಬೆಲೆ 45 ರೂ.ಗೆ ಮಾರಾಟವಾಗುತ್ತಿದೆ.