ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ ತಿಂಗಳ ಮೊದಲ ವಾರದಲ್ಲಿ (ಮೇ 2ರಿಂದ 6ರವರೆಗೆ ) ಯೂರೋಪ್ ಪ್ರವಾಸ ಕೈಗೊಂಡಿದ್ದಾರೆ.ಕೋಪನ್ಹೇಗನ್ನಲ್ಲಿ ನಡೆಯುವ ಪ್ರಮುಖ ಭಾರತ-ನಾರ್ಡಿಕ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಭಾರತ ಮತ್ತು ಫ್ರಾನ್ಸ್ಗಳು ಉದಯೋನ್ಮುಖ ಹಾಗೂ ನಿರ್ಣಾಯಕ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಪರಸ್ಪರ ಸಹಾಯ ಮಾಡಲು ಸಿದ್ಧವಿದ್ದು, ಅತ್ಯಂತ ನಿಕಟವಾದ ರಾಜಕೀಯ ಮತ್ತು ರಕ್ಷಣಾ ಸಂಬಂಧಗಳನ್ನು ಹೊಂದಿವೆ.
ಭಾರತ ಮತ್ತು ಫ್ರಾನ್ಸ್ ಹಿಂದೂ ಮಹಾಸಾಗರದ ತಳವನ್ನು ಮ್ಯಾಪಿಂಗ್ ಮಾಡುವುದರ ಜೊತೆಗೆ ಭಾರತದಲ್ಲಿ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ಸಬ್ಮೆರಿನ್ಗಳು ಮತ್ತು ಹೈ ಥ್ರಸ್ಟ್ ಏರ್ಕ್ರಾಫ್ಟ್ ಎಂಜಿನ್ಗಳನ್ನು ತಯಾರಿಸುವ ಮೂಲಕ ಪ್ರಧಾನಿ ಮೋದಿಯವರ ಆತ್ಮನಿರ್ಭರ್ ಭಾರತ್ ಯೋಜನೆಯಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.
ಮ್ಯಾಕ್ರನ್ ಅವರು ಎರಡನೇ ಅವಗೆ ಫ್ರೆಂಚ್ ಅಧ್ಯಕ್ಷರಾಗಿ ಪುನಾರಾಯ್ಕೆಯಾಗಿದ್ದು, ಭಾರತದ ಪ್ರಧಾನಿ ನರೇಂದ್ರಮೋದಿ ಅವರು ಪ್ಯಾರಿಸ್ನಲ್ಲಿ ಭಾರತದ ಹತ್ತಿರದ ದ್ವಿಪಕ್ಷೀಯ ಪಾಲುದಾರರ ನಾಯಕನನ್ನು ಭೇಟಿ ಮಾಡಲು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.