ನವದೆಹಲಿ: ಪ್ರಧಾನಿ ಮೋದಿಯವರನ್ನು ʼಸುಪ್ರೀಂ ನಟʼ ಎಂದು ನಟ ಪ್ರಕಾಶ್ ರಾಜ್ ಹೇಳಿರುವ ತುಣುಕೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ವ್ಯಕ್ತವಾಗಿದೆ.
ನವೆಂಬರ್ 19ರಂದು ನಡೆದ ವಿಶ್ವಕಪ್ ಕ್ರಿಕೆಟ್ನ ಫೈನಲ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲುನ್ನು ಕಂಡ ಬಳಿಕ ಟೀಮ್ ಇಂಡಿಯಾ ಆಟಗಾರರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದ್ದರು.ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋಗೆ ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಮೋದಿ ಅವರನ್ನು ಟೀಕಿಸಿದ್ದು, ʼʼಭಾರತದ ಹೀನಾಯ ಸೋಲಿನ ಬಳಿಕ ಸುಪ್ರೀಂ ನಟನ ಸ್ಟ್ರಿಪ್ಟ್ ತಲೆ ಕೆಳಗಾಗಿದೆ. ಇದು ಆರಂಭವಷ್ಟೇ. ಇನ್ನೂ ಈ ರೀತಿಯ ಘಟನೆ ನಡೆಯಲಿಕ್ಕಿದೆʼʼ ಎಂದು ಮೋದಿ ಅವರನ್ನು ಎಕ್ಸ್ನಲ್ಲಿ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.