ನವದೆಹಲಿ: ಪಂಜಾಬ್ನ ಭಾರತ-ಪಾಕಿಸ್ಥಾನ ಗಡಿಯಲ್ಲಿ ಬಿಎಸ್ಎಫ್ ಡ್ರೋನ್ ಒಂದನ್ನು ಹೊಡೆದುರುಳಿಸಿದೆ ಎಂದು ಸೇನಾ ಮೂಲಗಳು ಶನಿವಾರ ತಿಳಿಸಿವೆ.ಕಪ್ಪು ಬಣ್ಣದ ಡ್ರೋನ್ ಅನ್ನು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 300 ಮೀಟರ್ ಮತ್ತು ಗಡಿ ಬೇಲಿಯಿಂದ 150 ಮೀಟರ್ ದೂರದಲ್ಲಿ ಉರುಳಿಸಲಾಗಿದೆ ಎಂದು ಸೇನಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾ ನಿರ್ಮಿತ ಡ್ರೋನ್ ಅನ್ನು ಶುಕ್ರವಾರ ರಾತ್ರಿ 11:10 ರ ಸುಮಾರಿಗೆ ಫಿರೋಜ್ಪುರ ಸೆಕ್ಟರ್ನ ವಾನ್ ಗಡಿ ಪೋಸ್ಟ್ ಬಳಿ ಹೊಡೆದುರುಳಿಸಲಾಯಿತು.