News Karnataka Kannada
Monday, April 29 2024
ದೆಹಲಿ

ದೇಶದಲ್ಲಿ ಜನವರಿ ವೇಳೆಗೆ ಸೋಂಕಿನ ಪ್ರಕರಣ ಹೆಚ್ಚಳವಾಗುವ ಸಾಧ್ಯತೆ

Omicron
Photo Credit :

ನವದೆಹಲಿ : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರಿ ಒಮಿಕ್ರಾನ್  ವೈರಸ್ 2022 ರ ಜನವರಿ, ಫೆಬ್ರವರಿ ವೇಳೆಗೆ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರಾವ್, ಜನವರಿ 15ರ ನಂತರ ದೇಶದ ಹಲವು ಭಾಗಗಳಲ್ಲಿ ಒಮಿಕ್ರಾನ್ ವೈರಸ್ ನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದು, ಒಮಿಕ್ರಾನ್ ರೂಪಾಂತರವು ವಾಕರಿಕೆ, ವಾಂತಿ ಮತ್ತು ತಲೆನೋವುಗಳಿಗೆ ಕಾರಣವಾಗಬಹುದು. ಆದರೆ ಈ ವೈರಸ್ ನಿಂದ ಆಸ್ಪತ್ರೆಗೆ ಸೇರುವ ಹಾಗೂ ಮೃತಪಡುವ ಸಾಧ್ಯತೆ ಕಡಿಮೆ ಇದೆ. ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಒಮಿಕ್ರಾನ್ ಸೋಂಕು ನಾಲ್ಕು ಪಟ್ಟು ತೀವ್ರತೆಯಲ್ಲಿ ಹೆಚ್ಚುತ್ತಿದ್ದು, 1 ವಾರದಿಂದ 10 ದಿನಗಳ ಅವಧಿಯಲ್ಲಿ 16 ಪಟ್ಟು ತೀವ್ರತೆಗೆ ಏರಿದೆ. ಒಮಿಕ್ರಾನ್ ಸೋಂಕು 10 ದೇಶಗಳಿಂದ 35 ದೇಶಗಳಲ್ಲಿ ಹಬ್ಬಿದ್ದು, 450-500 ಪ್ರಕರಣಗಳು ದಾಖಲಾಗಿವೆ.

ಇನ್ನು ಮುಂಬೈನಲ್ಲಿ ಕರೋನವೈರಸ್‌ನ ಓಮಿಕ್ರಾನ್ ರೂಪಾಂತರದ ಇನ್ನೂ ಎರಡು ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಹೊಸ COVID-19 ರೂಪಾಂತರದ ಒಟ್ಟು ಸಂಖ್ಯೆ 10 ಕ್ಕೆ ಏರಿದೆ. ಇದರೊಂದಿಗೆ, ದೇಶದಲ್ಲಿ ವರದಿಯಾದ ಒಟ್ಟು ಒಮಿಕ್ರಾನ್ ಪ್ರಕಣಗಳ ಸಂಖ್ಯೆಯು 23 ಕ್ಕೆ ಏರಿಕೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು