News Karnataka Kannada
Sunday, May 12 2024
ದೆಹಲಿ

ಗ್ರ್ಯಾಮಿ ಪ್ರಶಸ್ತಿ ವಿಜೇತೆ ಗಾಯಕಿ ಫಲ್ಗುಣಿ ಶಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

Phalguni Modi
Photo Credit :

ನವದೆಹಲಿ, ಏ.5 : ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನ್ಯೂಯಾರ್ಕ್ ಮೂಲದ ಭಾರತೀಯ ಸಂಜಾತೆ ಗಾಯಕಿ ಫಲ್ಗುಣಿ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಫಾಲು ಎಂಬ ಹೆಸರಿನಿಂದ ಕರೆಯಲ್ಪಡುವ ಶಾ, ಅತ್ಯುತ್ತಮ ಮಕ್ಕಳ ಆಲ್ಬಮ್ ವಿಭಾಗದಲ್ಲಿ ಕಲರ್ಫುಲ್ ವಲ್ರ್ಡ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಫಲ್ಗುಣಿ ಶಾ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 40 ರ ದಶಕದ ಆರಂಭದಲ್ಲಿರುವ ಷಾ ಅವರು ಜೈಪುರ ಸಂಗೀತ ಸಂಪ್ರದಾಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಮತ್ತು ಕೌಮುದಿ ಮುನ್ಷಿ ಅವರ ಅಡಿಯಲ್ಲಿ ಬನಾರಸ್ ಶೈಲಿಯ ಠುಮ್ರಿ ಮತ್ತು ಉದಯ್ ಮಜುಂದಾರ್ ಅವರಿಂದ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.

2000 ರಲ್ಲಿ ಅಮೆರಿಕಕ್ಕೆ ತೆರಳಿದರು ಮತ್ತು ವೃತ್ತಿಜೀವನವು ಯೋ-ಯೋ ಮಾ, ವೈಕ್ಲೆಫ್ ಜೀನ, ಫಿಲಿಪ್ ಗ್ಲಾಸ, ರಿಕಿ ಮಾರ್ಟಿನ, ಬ್ಲೂಸ್ ಟ್ರಾವೆಲರ್ ಮತ್ತು ಎ ಆರ್ ರೆಹಮಾನ, ಇತರರೊಂದಿಗೆ ಬರೆತು ಸಂಗೀತ ಸುಧೆಯಲ್ಲಿ ತೇಲಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು