ದೆಹಲಿ : ಕೊರೋನಾ ಸೋಂಕಿನ ಮೂರನೇ ಅಲೆ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಗೂಗಲ್ ತನ್ನ ಉದ್ಯಮಿಗಳಿಗೆ ವರ್ಕ್ ಫ್ರಂ ಹೋಂ ಅವಧಿಯನ್ನು 2022ರ ಜನವರಿ 10ರವರೆಗೆ ವಿಸ್ತರಿಸದೆ.
ಈ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಮಾಹಿತಿ ನೀಡಿದ್ದು, ವಿಶ್ವದಾದ್ಯಂತ ಕೊರೋನಾ ಮತ್ತಷ್ಟು ವ್ಯಾಪಕವಾಗುವ ಭೀತಿಯ ಕುರಿತು ಗಮನಹರಿಸಿದ ಗೂಗಲ್ 2022ರ ಜನವರಿ 10ರವರೆಗೆ ಉದ್ಯಮಿಗಳು ವರ್ಕ್ ಫ್ರಂ ಹೋಂ ಮಾಡುವ ನಿರ್ಧಾರ ಮಾಡಿದೆ ಎಂದು ಸುಂದರ್ ಪಿಚೈ ತಮ್ಮ ಇ-ಮೇಲ್ ನಲ್ಲಿ ಉದ್ಯಮಿಗಳಿಗೆ ತಿಳಿಸಿದ್ದಾರೆ.
ಜನವರಿಯಲ್ಲಿ ಮತ್ತೆ ಪರಿಸ್ಥಿತಿ ಅವಲೋಕಿಸಿದ ಬಳಿಕ ವರ್ಕ್ ಫ್ರಂ ಹೋಂ ಕೊನೆಗೊಳಿಸುವುದು ಅಥವಾ ಮುಂದುವರೆಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದಿನ ವರ್ಷದಿಂದ ಸ್ಥಳೀಯ ಕಚೇರಿಗಳೇ ತಮ್ಮ ಉದ್ಯಮಿಗಳನ್ನು ಮರಳಿ ಕಚೇರಿಗೆ ಕರೆತರುವುದರ ಬಗ್ಗೆ ತೀರ್ಮಾನ ಮಾಡಲಿದೆ ಎಂದರು.
ಗೂಗಲ್ ತನ್ನ ಮೊದಲ ತ್ರೈ ಮಾಸಿಕದಲ್ಲ 1,39,995 ಮಂದಿಯನ್ನು ಹೊಂದಿದ್ದು, ಭಾರತದಲ್ಲಿ ಸುಮಾರು 4 ಸಾವಿರ ಜನರು ಗೂಗಲ್ ಗೆ ಕೆಲಸ ಮಾಡುತ್ತಿದ್ದಾರೆ.