ನವದೆಹಲಿ : ಒಮಿಕ್ರಾನ್ ಚಿಕಿತ್ಸೆ ವೇಳೆ ಆರೋಗ್ಯ ಸಂಬಂಧಿ ಹಾಗೂ ಇತರೆ ರೋಗಿಗಳಿಗೆ ಒಮಿಕ್ರಾನ್ ಹರಡದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಒಮಿಕ್ರಾನ್ ಸೋಂಕಿತರನ್ನು ನಿರ್ದಿಷ್ಟ ಕೋವಿಡ್ ಚಿಕಿತ್ಸಾ ಸೌಕರ್ಯವಿರುವ ಹಾಗೂ ಕ್ವಾರಂಟೈನ್ ಮಾಡಲು ವ್ಯವಸ್ಥೆ ಇರುವಲ್ಲಿಯೇ ಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದೆ.
ದೇಶದ ಹಲವು ಕಡೆ ಕೊರೊನಾ ರೂಪಾಂತರಿ ತಳಿಯಾದ ಒಮಿಕ್ರಾನ್ ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆಯೊಂದನ್ನು ಹೊರಡಿಸಿದೆ. ಒಮಿಕ್ರಾನ್ ಪತ್ತೆಯಾದವರನ್ನು ಆದಷ್ಟು ಬೇಗನೆ ಪತ್ತೆ ಹಚ್ಚಿ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಟ್ರೇಸ್ ಮಾಡುವುಸರ ಮೂಲಕ ಒಮಿಕ್ರಾನ್ ಹರಡುವುದನ್ನು ತಡೆಗಟ್ಟಬೇಕು ಎಂದೂ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ಸೂಚನೆ ನೀಡಿದೆ.